ಹಲ್ಲು ಜುಮ್ಮೆನಿಸುವ ಸಮಸ್ಯೆ ನಿವಾರಿಸುತ್ತೆ ಈ ಮನೆಮದ್ದು

Webdunia
ಗುರುವಾರ, 20 ಜೂನ್ 2019 (08:03 IST)
ಬೆಂಗಳೂರು : ಕೆಲವರಿಗೆ ಬಿಸಿ ಅಥವಾ ಕೋಲ್ಡ್ ವಸ್ತುಗಳನ್ನು ಬಾಯಿಗೆ ಹಾಕಿದಾಗ ಹಲ್ಲು ಜುಮ್ಮೆನಿಸುತ್ತದೆ. ಹಲ್ಲಿನ ದಂತಕವಚ ಹಾಗೂ ಬೇರುಗಳ ಸಮಸ್ಯೆಯಿಂದ ಈ ರೀತಿ ಸಮಸ್ಯೆ ಎದುರಾಗುತ್ತದೆ. ಇದನ್ನು ಕೆಲವು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.



*ಪೇರಳೆ ಎಲೆ ನೋವು ನಿವಾರಕ, ಉರಿಯೂತ ಹಾಗೂ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಪೇರಳೆ ಫ್ಲೇವನಾಯ್ಡ್ ಗಳಲ್ಲಿ ಸಮೃದ್ಧವಾಗಿರುವ ಸಾರಗಳನ್ನು ಬಳಸುವುದರಿಂದ ಹಲ್ಲುನೋವು ಶಮನವಾಗುತ್ತದೆ. ಆದ್ದರಿಂದ ಎರಡು ಮೂರು ಪೇರಳೆ ಎಲೆಗಳನ್ನು ಅಗಿಯುವುದರಿಂದ ಹಲ್ಲಿನ ಸೂಕ್ಷ್ಮತೆ ಮತ್ತು ನೋವು ಕಡಿಮೆಯಾಗುತ್ತದೆ.


*ಬೆಳ್ಳುಳ್ಳಿ ಮ್ಯಾಂಗನೀಸ್ ಮತ್ತು ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ತಾಮ್ರದ ಉತ್ತಮ ಮೂಲವಾಗಿದೆ. 2 ಬೆಳ್ಳುಳ್ಳಿಯ ಹಾಗೂ  3 ಲವಂಗವನ್ನು ಸೇರಿಸಿ ಅಗೆಯುವುದರಿಂದ ಆಲಿಸಿನ್ ಎಂಬ ಸಂಯುಕ್ತವು ಉತ್ಪಾದನೆಯಾಗುತ್ತದೆ. ಈ ಸಂಯುಕ್ತವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸ್ಟ್ರಪ್ಟೋಕೊಕಸ್ ಮ್ಯುಟಾನ್ ಗಳಂತಹ ಮೌಖಿಕ ಕಾಯಿಲೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments