Select Your Language

Notifications

webdunia
webdunia
webdunia
webdunia

ಎಚ್ಚರ! ಸಕ್ಕರೆಯ ಅತಿಯಾದ ಸೇವನೆ ಮುಖದ ಅಂದವನ್ನು ಕೆಡಿಸುತ್ತದೆ

ಎಚ್ಚರ! ಸಕ್ಕರೆಯ ಅತಿಯಾದ ಸೇವನೆ ಮುಖದ ಅಂದವನ್ನು ಕೆಡಿಸುತ್ತದೆ
ಬೆಂಗಳೂರು , ಗುರುವಾರ, 20 ಜೂನ್ 2019 (07:59 IST)
ಬೆಂಗಳೂರು : ಸಕ್ಕರೆ ತುಂಬಾ ಸಿಹಿಯಾಗಿರುವ ಕಾರಣ ಎಲ್ಲರೂ ಅದನ್ನು ಇಷ್ಟಪಡುತ್ತಾರೆ. ಆದರೆ ಅತಿಯಾಗಿ ಸೇವಿಸುವ ಸಕ್ಕರೆಯಿಂದ ಆರೋಗ್ಯ ಸಮಸ್ಯೆ ಕಾಡುವುದು ಮಾತ್ರವಲ್ಲ ಇದು ನಿಮ್ಮ ಮುಖವನ್ನು ಕೂಡ ಹಾನಿಗೊಳಿಸುತ್ತದೆ.




ಸಕ್ಕರೆಯನ್ನು ಅತಿಯಾಗಿ ಸೇವಿಸಿದರೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಇದು ನಿಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸ್ಥರಗೊಳಿಸುತ್ತದೆ. ಆದರೆ ದೇಹದಲ್ಲಿ ಇನ್ಸುಲಿನ್ ಹೆಚ್ಚೆಚ್ಚು ಬಿಡುಗಡೆಯಾದಂತೆ ದೇಹದಲ್ಲಿ ಉರಿಯೂತವು ಹೆಚ್ಚಾಗುತ್ತದೆ. ಇದರಿಂದ ಮುಖ ಕೆಂಪಾಗುತ್ತದೆ ಮತ್ತು ಮುಖದಲ್ಲಿ ಮೊಡವೆಗಳ ಸಮಸ್ಯೆ ಹೆಚ್ಚಾಗುತ್ತದೆ.


ಹಾಗೇ ನೀವು ಸಕ್ಕರೆ ಹೆಚ್ಚಾಗಿರುವ ಆಹಾರವನ್ನು ಸೇವಿಸಿದರೆ ಇದರಿಂದ ನಿಮ್ಮ ದೇಹದಲ್ಲಿರುವ ಕಾಲಜನ್ ಪ್ರೋಟಿನ್ ಜೊತೆ ಗ್ಲೈಕೆಶನ್ ಎಂಬ ಅಂಶ ಸೇರ್ಪಡೆಯಾಗಿ ಇದು ದೇಹದಲ್ಲಿರುವ ಕಾಲಜನ್ ಪ್ರೋಟಿನ್ ಮೇಲೆ ದಾಳಿ ಮಾಡುತ್ತದೆ. ಇದರಿಂದ ಚರ್ಮ ಬೇಗ ಸುಕ್ಕುಗಟ್ಟುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಸೇವನೆಯಿಂದ ಸ್ತನ ಕ್ಯಾನ್ಸರ್‌: ಮಹಿಳೆಯರೇ ಎಚ್ಚರ