ಮನೆಯಲ್ಲಿ ಬೆಳಗಿದ ದೀಪ ಕಟಕಟ ಅಂತ ಶಬ್ದ ಮಾಡಿದರೆ ಏನರ್ಥ ಗೊತ್ತಾ?

ಗುರುವಾರ, 20 ಜೂನ್ 2019 (07:57 IST)
ಬೆಂಗಳೂರು : ಎಲ್ಲರೂ ಪ್ರತಿದಿನ ಮನೆಯಲ್ಲಿ ದೇವರ ಮುಂದೆ ದೀಪ ಬೆಳಗುತ್ತಾರೆ. ಇದರಿಂದ ದೇವರು ಆ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಕರುಣಿಸುತ್ತಾನೆ ಎಂಬುದು ಅವರ ನಂಬಿಕೆ. ಆದರೆ ಈ ದೀಪದಿಂದ ಮುಂದೆ ಸಂಭವಿಸುವಂತಹ ಕೆಟ್ಟ ಘಟನೆಗಳ ಬಗ್ಗೆ ಸೂಚಿಸುತ್ತದೆಯಂತೆ.
ಹೌದು. ಮನೆಯಲ್ಲಿ ದೇವರ ಮುಂದೆ ಬೆಳಗುವ ದೀಪವನ್ನು ಯಾವುಗಲೂ ಗಮನಿಸುತ್ತಲೇ ಇರಬೇಕು. ಯಾಕೆಂದರೆ ಇದು ಮನೆಯಲ್ಲಿ ನಡೆಯುವಂತಹ ಶುಭ ಅಶುಭವನ್ನು ತಿಳಿಸುತ್ತದೆಯಂತೆ. ದೇವರ ಮನೆಯಲ್ಲಿ ಹಚ್ಚಿದ ದೀಪ ಉರಿಯುವಾಗ ಕಟಕಟ ಅಂತ ಶಬ್ದ ಮಾಡಿದರೆ ಸದ್ಯದಲ್ಲೇ ಮನೆಯಲ್ಲಿ ಶಾಂತಿ ಕದಡುತ್ತದೆ ಎಂದು ಅರ್ಥವಂತೆ. ಆ ಮನೆಯೊಳಗೆ ಕೆಟ್ಟ ಶಕ್ತಿಯ ಪ್ರವೇಶವಾಗಿದೆ. ಇದರಿಂದ ಮನೆಯಲ್ಲಿ  ಜಗಳ, ಕಲಹ ಉಂಟಾಗುತ್ತದೆ ಎಂಬುದನ್ನು ತಿಳಿಸುತ್ತದೆಯಂತೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?