Select Your Language

Notifications

webdunia
webdunia
webdunia
webdunia

ಪುರುಷರ ಆರೋಗ್ಯಕ್ಕೂ ಉತ್ತಮ ಈ ನೆಲ್ಲಿಕಾಯಿ

ಪುರುಷರ ಆರೋಗ್ಯಕ್ಕೂ ಉತ್ತಮ ಈ ನೆಲ್ಲಿಕಾಯಿ
ಬೆಂಗಳೂರು , ಭಾನುವಾರ, 17 ಅಕ್ಟೋಬರ್ 2021 (07:50 IST)
ಪ್ರಕೃತಿಯಲ್ಲಿ ಪ್ರತಿಯೊಂದ ಪದಾರ್ಥಗಳಿಗೆ ಅದರದ್ದೇ ಮಹತ್ವಹೊಂದಿದೆ. ಒದೊಂದು ಹಣ್ಣುಗಳು, ಕಾಯಿಗಳು ತಿಂದರೆ ಆರೋಗ್ಯಕ್ಕೆ ಉತ್ತಮ ಎಂದು ಎಲ್ಲರಿಗೂ ತಿಳಿದಿದೆ.

ನೆಲ್ಲಿಕಾಯಿಯ ವಿಶೇಷತೆ, ಪ್ರಯೋಜನಗಳ ಬಗ್ಗೆ ನಿಮಗೆ ಎಷ್ಟು ಗೊತ್ತು? ಹೌದು, ಈ ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇರುವುದರ ಜೊತೆಗೆ, ಕ್ಯಾಲ್ಸಿಯಂ ನಂತಹ ಅಂಶಗಳು ಕೂಡ ಕಂಡು ಬರುತ್ತವೆ. ಇದು ದೇಹವನ್ನು ರೋಗಗಳಿಂದ ದೂರವಿಡುವುದರ ಜೊತೆಗೆ, ಮೂಳೆಗಳನ್ನು ಬಲಪಡಿಸುತ್ತದೆ. ಹಾಗಿದ್ರೆ ನೆಲ್ಲಿಕಾಯಿ ಸೇವನೆಯಿಂದ ಆಗುವ ಮತ್ತಷ್ಟು ಉಪಯೋಗಗಳೇನು? ಇಲ್ಲಿದೆ ಸಂಪೂರ್ಣ ವಿವರ
ನೆಲ್ಲಿಕಾಯಿಯಿಂದ ದೇಹಕ್ಕೆ ಆಗುವ ಪ್ರಯೋಜನಗಳು
1. ಮಧುಮೇಹ ನಿಯಂತ್ರಿದುವಲ್ಲಿ ಸಹಾಯಕ
webdunia

ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಎಂಬ ಅಂಶಗಳು ಇರುತ್ತವೆ. ಇದು ಇನ್ಸುಲಿನ್ ಹಾರ್ಮೋನುಗಳನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೀಗಾಗಿ ಮಧುಮೇಹದ ಸಮಸ್ಯೆ ಇರುವವರು ನೆಲ್ಲಿಕಾಯಿ ಜ್ಯೂಸ್ ಸೇವಿಸಿ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಬಹುದು.
2. ಚರ್ಮದ ಕಾಂತಿ ಹೆಚ್ಚಿಸುತ್ತೆ
webdunia

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿಯನ್ನ ತಿಂದರೆ ಕೊಲಾಜೆನ್ನ ಕ್ಷೀಣತೆಯನ್ನು ನಿಧಾನಗೊಳಿಸುವ ಗುಣಗಳಿವೆ. ಈ ಸಾರದಲ್ಲಿ ವಿಟಮಿನ್ ಎ ಬಹಳ ಹೆಚ್ಚಿರುತ್ತೆ. ಕಾಲಜನ್ ಉತ್ಪಾದನೆಯಲ್ಲಿ ಯಾವುದು ಅತ್ಯಗತ್ಯ. ಇದು ಚರ್ಮವನ್ನು ಯುವ ಮತ್ತು ಮೃದವಾಗಿರಿಸುವ ಸಂಯುಕ್ತವಾಗಿದೆ.
3. ಹೃದ್ರೋಗ ಸಮಸ್ಯೆಗೆ ಪರಿಹಾರ
ನೆಲ್ಲಿಕಾಯಿಯಲ್ಲಿ ಫೈಬರ್ ಹಾಗೂ ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಇದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ನ ಆಕ್ಸಿಡೀಕರಣವನ್ನು ಕಂಟ್ರೋಲ್ ಮಾಡುತ್ತೆ. ಇನ್ನೂ ಆರ್ತ್ರೋಸ್ಕ್ಲೆರೋಸಿಸಿ ಅನ್ನು ತಡೆಯುತ್ತದೆ. ಅಲ್ಲದೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಮ್ಲಾ ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ.
4. ಅಸಿಡಿಟಿಗೂ ಪರಿಹಾರ
webdunia

ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಹೊಟ್ಟೆ ಮತ್ತು ಎದೆ ಉರಿ ಸಮಸ್ಯೆ ಇರುವವರು ಖಂಡಿತವಾಗಿಯೂ ನೆಲ್ಲಿಕಾಯಿ ರಸವನ್ನು ಸೇವಿಸಬೇಕು. ಹಾಗೆಯೇ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವರು ಕೂಡ ನೆಲ್ಲಿಕಾಯಿ ಜ್ಯೂಸ್ ಕುಡಿಯುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ದಿನಕ್ಕೆ ಎರಡು ಬಾರಿ ನೆಲ್ಲಿಕಾಯಿ ಜ್ಯೂಸ್ ಸೇವಿಸುವುದು ಹೊಟ್ಟೆಗೂ ಮತ್ತು ಆರೋಗ್ಯಕ್ಕೂ ಒಳ್ಳೆದು.
5. ಮೂಳೆಗಳನ್ನು ಬಲಪಡಿಸುತ್ತದೆ
webdunia

ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಈ ಕಾಯಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದರ ರಸವನ್ನು ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಕೀಲು ನೋವಿನಿಂದಲೂ ಪರಿಹಾರ ಕಾಣಬಹುದಾಗಿದೆ.
ಪುರುಷರಿಗೆ ಹೇಗೆ ನೆಲ್ಲಿಕಾಯಿ ಪ್ರಯೋಜನಕಾರಿಯಾಗಿದೆ?
ನೆಲ್ಲಿಕಾಯಿ ನೈಸರ್ಗಿಖ ಕಾಮೋತ್ತೇಜಕವಾಗಿ ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕಡಿಮೆ ವೀರ್ಯಾಣು ಸಂಖ್ಯೆಯಿಂದ ಬಳಲುತ್ತಿರುವ ಜನರಿಗೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೀಗೆ ಮಾಡಿ