Select Your Language

Notifications

webdunia
webdunia
webdunia
webdunia

ತೂಕ ಇಳಿಕೆಗೆ ತುಂಬಾ ಪರಿಣಾಮಕಾರಿಯಾಗಿದೆ ಈ ಅಂಜೂರ

ತೂಕ ಇಳಿಕೆಗೆ ತುಂಬಾ ಪರಿಣಾಮಕಾರಿಯಾಗಿದೆ ಈ ಅಂಜೂರ
ಬೆಂಗಳೂರು , ಬುಧವಾರ, 13 ಅಕ್ಟೋಬರ್ 2021 (15:18 IST)
ನವದೆಹಲಿ : ಅಂಜೂರದ ಹಣ್ಣುಗಳನ್ನು ತಿನ್ನುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಂಜೂರದಲ್ಲಿ ಫೈಬರ್ ಸಮೃದ್ಧವಾಗಿದೆ.

ಅಂಜೂರ ಸೇವನೆಯಿಂದ ತುಂಬಾ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಸಿವಿನ ಅನುಭವವಾಗುವುದಿಲ್ಲ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಬೊಜ್ಜು ಕಮ್ಮಿಯಾಗುತ್ತದೆ
webdunia

ಅಂಜೂರದಲ್ಲಿ ಇರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ಇರಿಸುತ್ತವೆ ಮತ್ತು ನಿಮ್ಮ ಮೂಳೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿದಿನ ಅಂಜೂರದ ಹಣ್ಣುಗಳನ್ನು ತಿನ್ನುವುದು ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕ್ಯಾಲೋರಿ ನಿಯಂತ್ರಿತ ಸಮತೋಲಿತ ಆಹಾರದಲ್ಲಿ ನೀವು ಇದನ್ನು ಸೇರಿಸಿಕೊಳ್ಳಬಹುದು. ಇದನ್ನು ತಾಜಾ ಅಥವಾ ಒಣ ರೂಪದಲ್ಲಿ ಸೇವಿಸಿ.
ಹೃದ್ರೋಗದಿಂದ ರಕ್ಷಿಸುತ್ತದೆ
ತೂಕ ಇಳಿಕೆಯ ಜೊತೆಗೆ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಅಂಜೂರದ ಹಣ್ಣುಗಳನ್ನು ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ. ಅಂಜೂರದಲ್ಲಿ ಪೊಟ್ಯಾಸಿಯಮ್ ಪ್ರಮಾಣವು ತುಂಬಾ ಹೆಚ್ಚಿರುತ್ತದೆ ಮತ್ತು ಆದ್ದರಿಂದ ಇದು ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಂಜೂರದಲ್ಲಿ ಇರುವ ಆಹಾರದ ನಾರಿನ ಪ್ರಮಾಣವು ನಿಮ್ಮನ್ನು ಪದೇ ಪದೇ ತಿನ್ನುವುದರಿಂದ ದೂರವಿರಿಸುತ್ತದೆ. ಈ ಕಾರಣದಿಂದಾಗಿ ದೈನಂದಿನ ಕ್ಯಾಲೋರಿ ಸೇವನೆಯು ಹೆಚ್ಚಾಗುವುದಿಲ್ಲ. ಅಂಜೂರದಲ್ಲಿ ಇರುವ ಫಿಸಿನ್ ಕಿಣ್ವವು ಜೀರ್ಣಾಂಗಕ್ಕೆ ಒಳ್ಳೆಯದು. ಇದು ಆಹಾರದ ಜೀರ್ಣಕ್ರಿಯೆಗೆ ತ್ವರಿತವಾಗಿ ಸಹಾಯ ಮಾಡುತ್ತದೆ.
ಅಂಜೂರದ ಹಣ್ಣುಗಳು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತವೆ, ಆದ್ದರಿಂದ ಇದು ವ್ಯಾಯಾಮದ ಸಮಯದಲ್ಲಿ ಸ್ನಾಯುಗಳಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅಂಜೂರದ ಹಣ್ಣು ನಿಮ್ಮನ್ನು ಹೃದಯ ರೋಗಗಳ ಅಪಾಯದಿಂದಲೂ ರಕ್ಷಿಸುತ್ತದೆ.
ಮೆಟಾಬಾಲಿಸಂಗೆ ಉತ್ತಮ
ಇದರಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಶಿಯಂ, ರಂಜಕ, ಮ್ಯಾಂಗನೀಸ್, ತಾಮ್ರ ಮತ್ತು ಮೆಗ್ನೀಶಿಯಂನಂತಹ ಖನಿಜಗಳು ತೂಕ ಇಳಿಸುವಲ್ಲಿ ಸಹಾಯಕವಾಗಿವೆ. ಇದರ ಹೊರತಾಗಿ, ಅಂಜೂರದಲ್ಲಿ ವಿಟಮಿನ್ ಎ ಮತ್ತು ಬಿ ಕೂಡ ಸಮೃದ್ಧವಾಗಿದೆ, ಇದು ಚಯಾಪಚಯ ದರವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ.
ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಡಿ
ಅಂಜೂರದದಲ್ಲಿ ಕ್ಯಾಲೋರಿ ಅಂಶ ತುಂಬಾ ಕಡಿಮೆಯಾಗಿದೆ, ಆದ್ದರಿಂದ ನೀವು ತಿಂಡಿಗಳ ಬದಲು ಅಂಜೂರದ ಹಣ್ಣುಗಳನ್ನು ಸೇವಿಸಿದರೆ, ನಿಶ್ಚಿತವಾಗಿಯೂ ನೀವು ನಿಮ್ಮ ಕ್ಯಾಲೋರಿಗಳನ್ನೂ ಕಡಿಮೆ ಮಾಡಿಕೊಳ್ಳಬಹುದು. ಆದರೆ, ಅಂಜೂರದ ಹಣ್ಣುಗಳನ್ನು ಅತಿಯಾಗಿ ಸೇವಿಸಬೇಡಿ. ಅಷ್ಟೇ ಅಲ್ಲ ಅದರ ರುಚಿ ಸಿಹಿಯಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಇದು ಹೆಚ್ಚಿನ ಜನರಿಗೆ ಪ್ರಯೋಜನ ಕೂಡ ನೀಡುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮ ಸುಕ್ಕಾಗಿದ್ರೆ ಮನೆಯಲ್ಲಿನ ಈ ವಸ್ತುಗಳನ್ನು ಬಳಸಿ ಪರಿಹಾರ ಪಡೆಯಿರಿ