Select Your Language

Notifications

webdunia
webdunia
webdunia
webdunia

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೀಗೆ ಮಾಡಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೀಗೆ ಮಾಡಿ
ಬೆಂಗಳೂರು , ಶನಿವಾರ, 16 ಅಕ್ಟೋಬರ್ 2021 (15:22 IST)
ಬೆಳಗ್ಗೆ ಎದ್ದ ಕೂಡಲೇ ಬ್ರಶ್ ಮಾಡಿ 5 ರಿಂದ 10 ನಿಮಷಗಳ ಕಾಲ ನಾವು ಹೇಳುವುದಕ್ಕೆ ಸಮಯ ಕೊಟ್ಟು, ನಿಮ್ಮ ಆರೋಗ್ಯವನ್ನು ಉತ್ತಮಗೊಳಸಿಕೊಳ್ಳಲಿ.

ಬೆಳಗ್ಗೆ ಎದ್ದ ಕೂಡಲೇ ಕೆಲವರಿಗೆ ಕಾಫಿ, ಟೀ ಕುಡಿಯುವ ಅಭ್ಯಾವಸವಿರುತ್ತೆ. ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯುವುದು ತುಂಬಾ ಅಪಾಕಯಕಾರಿ. ಕುಡಿಯುವಾಗ ಆಹ್ಲಾದಕರ ಮಜಾ ನೀಡುವ ಕಾಫಿ, ಟೀ ನಿಮ್ಮ ಆರೋಗ್ಯದ ಪರಿಣಾಮ ಬೀರುತ್ತೆ. ಹಾಗಿದ್ರೆ ಬೆಳಗ್ಗೆಎದ್ದ ಕೂಡಲೇ ಏನು ಮಾಡಬೇಕು? ಅನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ
ಬ್ರಶ್ ಮಾಡಿದೆ ಮೇಲೆ ಇವುಗಳನ್ನ ಮಾಡಿ
1. ಕರಿಬೇವು, ಅರ್ಧ ಚಮಚ ಜೀರಿಗೆ
webdunia

ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಿದ ನಂತರ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ, ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡುತ್ತದೆ.
2. ಹೆಲ್ತಿ ಟೀ ಕುಡಿಯಿರಿ
ನಿಮಗೆ ರಾತ್ರಿಯಿಂದ ತಲೆನೋವಿದ್ದು, ಬೆಳಗ್ಗೆ ಎದ್ದಾಗಲೂ ತಲೆನೋವಿದ್ದರೆ, ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ.
3. ನೆಲ್ಲಿಕಾಯಿ ಜ್ಯೂಸ್, ಮೆಂತೆ ಪುಡಿ
webdunia

ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಮಾಡಿ ಅದಕ್ಕೆ ಮೆಂತೆ ಪುಡಿ ಹಾಕಿ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ. ನೆಲ್ಲಿಕಾಯಿ ಜ್ಯೂಸ್ನಿಂದ ನಿಮ್ಮ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
4. ಕೊತ್ತಂಬರಿ ಸೊಪ್ಪನ್ನು ಅಗೆಯಿರಿ
webdunia

ಎಷ್ಟೇ ಬ್ರಶ್ ಮಾಡಿದರು ನಿಮ್ಮ ಬಾಯಿಯ ದುರ್ಗಂಧ ನಿವಾರಣೆಯಾಗುತ್ತಿಲ್ಲವಾ? ಹಾಗಿದ್ರೆ ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗೆಯುವುದರಿಂದ ದಂತಕ್ಷಯ ಹಾಗೂ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
5. ದ್ರಾಕ್ಷಿ ರಸದ ಜತೆ ಜೇನುತುಪ್ಪ
webdunia

ನಿಮ್ಮ ದೇಹದಲ್ಲಿ ರಕ್ತ ಕಡಿಮೆಯಾಗಿದ್ಯಾ?ರಕ್ತಹೀನತೆಯಿಂದ ಬಳಲುತ್ತಿರುವವರು ದ್ರಾಕ್ಷಾರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
6. ತಣ್ಣಗಿರುವ ಹಾಲನ್ನು ಕುಡಿಯಿರಿ
webdunia

ಬೆಳ್ಳಂಬೆಳಗ್ಗೆ ಎದ್ದ ಕೂಡಲೇ ನಿಮಗೆ ಗ್ಯಾಸ್ಟ್ರಿಕ್ ನಿಂದ ಎದೆ ಉರಿ, ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತಿದೆಯಾ?ಹಾಗಿದ್ರೆ ಸಕ್ಕರೆ ಬೆರಸದೆ ತಣ್ಣಗಿರುವ ಹಾಲನ್ನು ಕುಡಿಯಿರಿ. ತಣ್ಣಗಿರುವ ಹಾಲು ದೇಹದಲ್ಲಿರುವ ಆಸಿಡ್ ಅಂಶಗಳನ್ನು ಹೀರಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ನಿಂದಾಗುವ ಉರಿಯನ್ನು ಶಮನಗೊಳಿಸುತ್ತದೆ.
7. ಮೂಸಂಬಿ ಜ್ಯೂಸ್ ಸೇವಿಸಿ
webdunia

ಪ್ರತಿದಿನ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕಾಮಾಲೆ ರೋಗವನ್ನು ನಿವಾರಿಸುತ್ತದೆ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರೆಯುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊಸರಿನ ಮ್ಯಾಜಿಕ್ ಫೇಸ್ ಪ್ಯಾಕ್ ಬಳಸಿ