Select Your Language

Notifications

webdunia
webdunia
webdunia
webdunia

ಮಿಲನದ ನಂತರ ಹೀಗೆ ಮಾಡಿದರೆ ಗರ್ಭ ಧರಿಸಬಹುದಂತೆ

ಮಿಲನದ ನಂತರ ಹೀಗೆ ಮಾಡಿದರೆ ಗರ್ಭ ಧರಿಸಬಹುದಂತೆ
ಬೆಂಗಳೂರು , ಶನಿವಾರ, 15 ಜೂನ್ 2019 (06:38 IST)
ಬೆಂಗಳೂರು : ಸಾಮಾನ್ಯವಾಗಿ ಅಂಡಾಣು ಬಿಡುಗಡೆಯಾದ ದಿನ ಅಥವಾ ಹಿಂದಿನ ದಿನ ಅಥವಾ ಮರುದಿನ ಮಿಲನವಾದರೆ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ . ಆದರೆ ಕೆಲವರು ಈ ವೇಳೆಯಲ್ಲಿಯೂ ಮಿಲನವಾದರೂ ಕೂಡ ಗರ್ಭಿಣಿಯಾಗುವುದಿಲ್ಲ. ಅಂತವರು ಮಿಲನದ ನಂತರ ಈ ರೀತಿ ಮಾಡಿದರೆ ಖಂಡಿತ ಬೇಗ ಮಗು ಪಡೆಯಬಹುದು.




ತಜ್ಞರ ಪ್ರಕಾರ ಸಂಭೋಗದ ನಂತರ ಹೆಣ್ಣುಮಕ್ಕಳು ಕನಿಷ್ಠ 20 ನಿಮಿಷಗಳಾದರೂ ಹಾಸಿಗೆಯಲ್ಲಿಯೇ ಮಲಗಿರುವುದು ಒಳಿತು. ಒಂದು ಗಂಟೆ ಇದ್ದರಂತೂ ಇನ್ನು ಪರಿಣಾಮಕಾರಿ  ಎನ್ನುತ್ತಾರೆ. ಯಾಕೆಂದರೆ ವೀರ್ಯಾಣು ಜನನಾಂಗದ ಮೂಲಕ ಗರ್ಭಕೋಶವನ್ನು ಸೇರಲು ಇದು ಸಹಕರಿಸುತ್ತದೆ. ಹಾಗೇ ಮೊಣಕಾಲನ್ನು ಮೇಲೆತ್ತಿರುವ ಭಂಗಿಯಲ್ಲಿ ಮಲಗಿದರೆ ಇನ್ನು ಉತ್ತಮ.

 

ಹಾಗೇ ಈ ಮಿಲನದ ನಂತರ ದೇಹದ ಉಷ್ಣತೆಯನ್ನು ಹೆಚ್ಚಿಸುವ ದೇಹ ದಂಡಿಸುವ ಕಾರ್ಯಗಳನ್ನು ಮಾಡಬಾರದು. ಸುದೀರ್ಘ ಓಟ, ನಡಿಗೆ,  ಬಾತ್ ಟಬ್ ಸ್ನಾನ, ಇವುಗಳನ್ನು ಮಾಡಬಾರದು.  ದೇಹದ ಉಷ್ಣತೆಯನ್ನು ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಬಾರದು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕುತ್ತಿಗೆ ಸುತ್ತವಿರುವ ಕಪ್ಪುಕಲೆ ಹೋಗಲಾಡಿಸಿ ಸುಂದರವಾಗಿಸಲು ಇದನ್ನು ಹಚ್ಚಿ