Publish Date: Mon, 10 Jun 2019 (09:58 IST)
Updated Date: Mon, 10 Jun 2019 (10:00 IST)
ಬೆಂಗಳೂರು: ಮಹಿಳೆಯರು ಒಂದು ಹೆರಿಗೆಯಾದ ಬಳಿಕ ಸಾಮಾನ್ಯವಾಗಿ ಗರ್ಭನಿರೋಧಕವಾಗಿ ಬಳಸುವ ಕಾಪರ್ ಟಿ ಲೈಂಗಿಕ ಸಮಾಗಮ ಸಮಯದಲ್ಲಿ ತೊಂದರೆ ಕೊಡುತ್ತದೆ ಎಂಬ ತಪ್ಪು ಕಲ್ಪನೆ ಕೆಲವರಿಗಿದೆ.
ಸಾಮಾನ್ಯವಾಗಿ ಕಾಪರ್ ಟಿ ಹಾಕಿಸಿಕೊಂಡ ಆರಂಭದ ಕೆಲವು ದಿನಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ನಂತರ ಇದರಿಂದ ಸಮಸ್ಯೆಯೇನಿಲ್ಲ. ಒಂದು ವೇಳೆ ನೋವು ಕಾಣಿಸಿಕೊಂಡರೆ ಅದಕ್ಕೆ ಬೇರೆಯದೇ ಕಾರಣವಿರಬಹುದು. ಅದಕ್ಕೂ ಹೊರತಾಗಿ ತೊಂದರೆ ಕಂಡುಬಂದರೂ ಅದನ್ನು ಸುಲಭವಾಗಿ ಹೊರತೆಗೆಯಬಹುದು. ಹಾಗಾಗಿ ಚಿಂತೆ ಬೇಕಾಗಿಲ್ಲ!