Webdunia - Bharat's app for daily news and videos

Install App

ನೆನಪಿನ ಶಕ್ತಿ ಹೆಚ್ಚಿಸಲು ಸಹಾಯಕಾರಿ ಈ 5 ಸಸ್ಯಗಳು

Webdunia
ಬುಧವಾರ, 3 ಜುಲೈ 2019 (08:59 IST)
ಬೆಂಗಳೂರು : ನೆನಪಿನ ಶಕ್ತಿ ಕಡಿಮೆಯಿದ್ದರೆ ಅಂತವರಿಗೆ ಯಾವ ವಿಷಯವೂ ಬೇಗ ನೆನಪಾಗಲ್ಲ. ಅಲ್ಲದೇ  ನೆನಪಿನ ಶಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳು ಓದಿನ ವಿಚಾರ ನೆನಪಿನಲ್ಲಿ ಉಳಿಯದೇ ತುಂಬಾ ಕಷ್ಪಡುತ್ತಾರೆ. ಈ ನೆನಪಿನ ಶಕ್ತಿಯನ್ನು ಕೆಲವು ಗಿಡಮೂಲಕೆಗಳಿಂದ ಹೆಚ್ಚಿಸಬಹುದು.




* ಗಿಂಕ್ಗೊ ಬಿಲೋಬಾ :ಈ ಸಸ್ಯ ಮದುಳಿನ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮೆದುಳಿಗೆ ನೀರನ್ನು ಪೂರೈಕೆ ಮಾಡುವ ರಕ್ತನಾಳಗಳ ಹಿಗ್ಗುವಿಕೆಗೆ ಕಾರಣವಾಗಿದೆ. ಇದು ಮೆದುಳಿನ ಬೇಕಾದ 20% ನಷ್ಟು ಆಮ್ಲಜನಕವನ್ನು ಪೂರೈಸುತ್ತದೆ.


*ಬಕೋಪಾ : ಈ ಸಸ್ಯ ಬುದ್ಧಿಶಕ್ತಿ ಹಾಗೂ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ವಿವಿಧ ಸಮಸ್ಯೆಗಳಾದ ಆತಂಕ, ಖಿನ್ನತೆ ಮುಂತಾದವುಗಳ  ಚಿಕಿತ್ಸೆಗೆ ಇದನ್ನು ಬಳಸುತ್ತಾರೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಬ್ಯಾಕೊಪಾ ವಿದ್ಯಾರ್ಥಿಗಳಲ್ಲಿ ಸ್ಮರಣೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ


*ಸಾಗೆ : ಇದು ಜೀರ್ಣಕ್ರಿಯೆಗೆ ಹಾಗೂ ಮಹಿಳೆಯರ ಮುಟ್ಟಿನ ಸಮಸ್ಯೆಗೆ ಬಳಸಲಾಗುತ್ತದೆ. ಅಲ್ಲದೇ ಇದು ಮೆಮೊರಿ ಪವರ್ ಹೆಚ್ಚಿಸಲು ಸಹಕಾರಿಯಾಗಿದೆ. ಇದನ್ನು ಆಲ್ ಜೈಮರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಮೆಮೋರಿ ಸಾಮರ್ಥ್ಯ ಹೆಚ್ಚಿಸಲು ಉಪಯೋಗಕಾರಿಯಾಗಿದೆ.


*ಬ್ಲೂಬೆರಿ : ಇದು ಮೆದುಳಿನ ಅಂಗಾಂಶವನ್ನು ರಕ್ಷಿಸುತ್ತದೆ. ಮೋಟಾರ್ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಮೆಮೊರಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ


*ಗ್ರೀನ್ ಟೀ : ಆಲ್ ಜೈಮರ್ ಸಮಸ್ಯೆ ಕಡಿಮೆ ಪ್ರಮಾಣದಲ್ಲಿರುವವರಿಗೆ ಇದರಿಂದ ತಯಾರಿಸಿದ ಔಷಧವನ್ನು ನೀಡುತ್ತಾರೆ. ಯಾಕೆಂದರೆ ಕಳೆದುಹೋದ ಮೆಮೊರಿಯನ್ನು ವಾಪಾಸು ತರಿಸಲು ಸಹಕಾರಿಯಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments