Webdunia - Bharat's app for daily news and videos

Install App

ಆರೋಗ್ಯಕರ ಶುಂಠಿ ಚಹಾದ ಲಾಭಗಳು

Webdunia
ಶುಕ್ರವಾರ, 20 ಜುಲೈ 2018 (17:45 IST)
ಪ್ರತಿದಿನ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯಯಾ? ಹಾಗಾದರೆ ಚಹಾದಲ್ಲಿ ಸಣ್ಣ ಶುಂಠಿ ತುಂಡನ್ನು ಹಾಕಿ ಕುಡಿಯಿರಿ. ಇದು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಶುಂಠಿ ಮ್ಯೆಗ್ನೀಶಿಯಂ,ಶೋಗವ್ಲ್, ಪೊಟಾಶಿಯಂ, ಜಿಂಜೆರೊಲ್, ವಿಟಮಿನ್ ಬಿ6 ಮತ್ತು ಸಿ ಹಾಗು ಝಿಂಜೆರೋನ್, ಫರ್ನೆಸೀನ್ ಮತ್ತು ಬೀಟಾ-ಫೆಲ್ಲಾಡ್ರೀನ್, ಸಿನಿಯೊಲ್ ಹಾಗು ಸಿಟ್ರಾಲ್‍ನಂತಹ ಉಪಯುಕ್ತವಾದ ಎಣ್ಣೆಗಳನ್ನು ಹೊಂದಿದೆ.
- ಹಾನಿಕಾರಕ ಪದಾರ್ಥಗಳಿಂದ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಆಂಟಿಹೆಲ್ಮಿಥಿಕ್ ಪರಿಣಾಮವನ್ನು ತೋರಿಸುತ್ತದೆ
 
- ಶುಂಠಿ ಚಹಾ ಒತ್ತಡ ನಿವಾರಿಸಿ, ಮೂಡ್ ಚೆನ್ನಾಗಿರಿಸುತ್ತದಲ್ಲದೆ, ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.
 
- ಯಕೃತ್ತು ಮತ್ತು ಮೂತ್ರದ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ.
 
- ಅಸ್ತಮಾ ರೋಗಿಗಳಿಗೂ ಇದು ಉತ್ತಮ. ಶ್ವಾಸಕೋಶ ಸಡಿಲಗೊಳಿಸಿ, ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸುತ್ತದೆ.
 
- ಶುಂಠಿ ಸ್ನಾಯು ಮತ್ತು ಜಂಟಿ ನೋವನ್ನು ನಿವಾರಿಸಬಲ್ಲ ಶಕ್ತಿ ಹೊಂದಿದ್ದು ಉರಿಯೂತದ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ.
 
- ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
 
- ಇದು ಕೆಮ್ಮು, ಶೀತ ಮತ್ತು ಗಂಟಲುಬೇನೆಗೆ ಉತ್ತಮ ಪರಿಹಾರ ನೀಡುತ್ತದೆ.
 
- ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ.
 
- ಶುಂಠಿಯನ್ನು ಜಗಿದು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
 
- ಪ್ರಯಾಣ ಮಾಡುವ ಮೊದಲು ಲೋಟ ಶುಂಠಿ ಚಹಾ ಕುಡಿದರೆ ವಾಕರಿಕೆ ಮತ್ತು ವಾಂತಿ ತಡೆಗಟ್ಟಬಹುದು.
 
- ಅಸ್ತಮಾ ರೋಗದಿಂದ ಬಳಲುತ್ತಿರುವವರು ಶುಂಠಿ ಚಹಾ ಕುಡಿಯುವುದರಿಂದ ಶ್ವಾಸಕೋಶ ಸಡಿಲಗೊಳಿಸಿ, ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸುತ್ತದೆ.
 
- ಆಸ್ಟ್ರೀಯೋ ಅಥ್ರೈಟಿಸ್​ನ್ನು ಕಡಿಮೆ ಮಾಡಲು ಶುಂಠಿಯು ಹೆಚ್ಚು ಸಹಕಾರಿ.
 
- ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಶುಂಠಿ ಚಹಾವನ್ನು ಕುಡಿಯುವುದರಿಂದ ನೋವನ್ನು ಕಡಿಮೆ ಮಾಡಬಹುದು.
 
- ಶುಂಠಿ ಚಹಾ ಸೇವಿಸುವುದರಿಂದ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ.
 
ಶುಂಠಿ ಚಹಾ ಮಾಡುವುದು ಹೇಗೆ?
 
ಬೇಕಾಗುವ ಸಾಮಗ್ರಿಗಳು
1 ಚಮಚ ಸಕ್ಕರೆ
1 ಕಪ್‌ ನೀರು
1 ಕಪ್‌ ಹಾಲು
ಸಣ್ಣ ತುಂಡರಿಸಿದ ತಾಜಾ ಶುಂಠಿ
1/2 ಚಮಚ ಚಹಾಪುಡಿ
 
ಮಾಡುವ ವಿಧಾನ
ಎಲ್ಲ ಪದಾರ್ಥಗಳನ್ನು ಪಾತ್ರೆಯಾಂದರಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸವಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ
Show comments