ಬೆಂಗಳೂರು: ಕಚೇರಿಯ ಕೆಲಸದ ಒತ್ತಡದ ನಡುವೆ ದಾಂಪತ್ಯ ಜೀವನವನ್ನೂ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ!
									
								
			        							
								
																	ಡೆಡ್ ಲೈನ್ ನಿರ್ವಹಿಸಿ
ಆದಷ್ಟು ಕಚೇರಿ ಕೆಲಸಗಳನ್ನು ಮನೆಗೆ ತರದಂತೆ, ಕಚೇರಿಯಲ್ಲೇ ಮುಗಿಸಲು ನಿಮ್ಮಷ್ಟಕ್ಕೆ ನೀವೇ ಡೆಡ್ ಲೈನ್ ಹಾಕಿಕೊಳ್ಳಿ. ಇದರಿಂದ ಮನೆಗೆ ಬಂದ ಮೇಲೆ ಮನೆ ವಿಚಾರ ನೋಡಿಕೊಳ್ಳಬಹುದು.
									
											
									
			        							
								
																	ಡಯಟ್
ಕೆಲಸದ ಒತ್ತಡಗಳನ್ನು ಮನೆಗೆ ಬಂದು ಮರೆತು, ಲೈಂಗಿಕ ಜೀವನದ ಕಡೆಗೆ ಗಮನ ಹರಿಸಬೇಕೆಂದರೆ ಉತ್ತಮ ಆಹಾರ ಸೇವಿಸಿ, ವ್ಯಾಯಾಮ ಮಾಡಿ. ಇದು ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
									
			                     
							
							
			        							
								
																	ಆತ್ಮವಿಮರ್ಶಿಸಿ
ಸಮಸ್ಯೆಯ ನಿಜವಾದ ಕಾರಣ ತಿಳುದಕೊಳ್ಳಿ. ಯಾವ ಕಾರಣಕ್ಕೆ ಯಾವ ಕೆಲಸ ನಿಮ್ಮನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ಮಾಡುತ್ತದೆ, ಅದಕ್ಕೆ ಸಮಯದ ಅಭಾವ ಸೃಷ್ಟಿಸುತ್ತದೆ ಎಂದು ಪರಾಮರ್ಶಿಸಿ. ಸಮಸ್ಯೆ ಗೊತ್ತಾದರೆ ಪರಿಹಾರವೂ ಸುಲಭ.
									
			                     
							
							
			        							
								
																	ಮೆಸೇಜ್ ಗಳು!
ಲೈಂಗಿಕ ತಜ್ಞರ ಪ್ರಕಾರ ಸಂವಹನವೇ ಸುಗಮ ಲೈಂಗಿಕತೆಗೆ ದಾರಿ. ಹಾಗಾಗಿ ಕಚೇರಿಯಲ್ಲಿ ಎಷ್ಟೇ ಕೆಲಸದ ಒತ್ತಡವಿದ್ದರೂ ನಡು ನಡುವೆ ಸಂಗಾತಿ ರೊಮ್ಯಾಂಟಿಕ್ ಸಂದೇಶ ಕಳುಹಿಸುತ್ತಿರಿ. ಇದರಿಂದ ನಿಮ್ಮ ಸಂಬಂಧವೂ ಜೀವಂತವಾಗಿರುತ್ತದೆ.
									
			                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.