Webdunia - Bharat's app for daily news and videos

Install App

ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗಲು ಇಲ್ಲಿದೆ ನೋಡಿ ಸೂಪರ್ ಟಿಪ್ಸ್

Webdunia
ಸೋಮವಾರ, 3 ಫೆಬ್ರವರಿ 2020 (04:45 IST)
ಬೆಂಗಳೂರು : ಮಕ್ಕಳು ಬುದ್ದಿವಂತರಾಗಿರಬೇಕೆಂದು ಎಲ್ಲಾ ತಂದೆತಾಯಿ ಬಯಸುತ್ತಾರೆ. ಆದರೆ ಕೆಲವು ಮಕ್ಕಳಿಗೆ ಜ್ಞಾಪಕಶಕ್ತಿ ಕಡಿಮೆ ಇರುವುದರಿಂದ  ಎಷ್ಟೇ  ಓದಿದರೂ ನೆನಪು ಉಳಿಯುವುದಿಲ್ಲ. ಇಂತಹ ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸಲು ಈ ಮನೆಮದ್ದು ಬಳಸಿ.


ಏಲಕ್ಕಿ ಪುಡಿ 4 ಗ್ರಾಂ, ಲವಂಗ ಪುಡಿ 8 ಗ್ರಾಂ , ಹಿಪ್ಪಲಿ ಚೂರ್ಣ 15 ಗ್ರಾಂ, ಜೀರಿಗೆ ಪುಡಿ 4 ಗ್ರಾಂ, ಕಲ್ಲುಸಕ್ಕರೆ ಪುಡಿ 75 ಗ್ರಾಂ, ಒಣಶುಂಠಿ ಪುಡಿ 8 ಗ್ರಾಂ, ಒಂದೆಲಗ ಸೊಪ್ಪಿನ ಪುಡಿ 75 ಗ್ರಾಂ, ಬಜೆ 15 ಗ್ರಾಂ, ಗೋರಾಖ್ ಮುಂಡಿ(ಶ್ರಾವಣಿ ಗಿಡ) 75 ಗ್ರಾಂ, ಜೇನುತುಪ್ಪ 150 ಗ್ರಾಂ ಇವಿಷ್ಟನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿದರೆ ಪೇಸ್ಟ್ ಸಿಗುತ್ತದೆ. ಇದನ್ನು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಆದರೆ ಇದನ್ನು ಫ್ರಿಜ್ ನಲ್ಲಿ ಇಡಬೇಡಿ. ಇದನ್ನು 5 ರಿಂದ 105 ವರ್ಷದವರೆಗಿನವರು ತಿನ್ನಬಹುದು.

5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ  ಬೆಳಿಗ್ಗೆ 5 ಗ್ರಾಂ, ಸಂಜೆ 5 ಗ್ರಾಂ ಊಟಕ್ಕೆ ಒಂದು ಗಂಟೆ ಮುಂಚೆ ತಿನ್ನಿಸಿ ಆಮೇಲೆ 1 ಗ್ಲಾಸ್ ನೀರು ಕುಡಿಸಿ. 15 ವರ್ಷ ಮೇಲ್ಪಟ್ಟವರಿಗೆ ಬೆಳಿಗ್ಗೆ10 ಗ್ರಾಂ, ಸಂಜೆ 10 ಗ್ರಾಂ ಊಟಕ್ಕೆ ಒಂದು ಗಂಟೆ ಮುಂಚೆ ತಿಂದು ಆಮೇಲೆ 1 ಗ್ಲಾಸ್ ನೀರು ಕುಡಿಯಿರಿ. ಇದನ್ನು 4-5 ತಿಂಗಳು ಮಾಡಿದರೆ ಬುದ್ಧಿ ಶಕ್ತಿ ತುಂಬಾ ಚುರುಕಾಗುತ್ತಾರೆ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments