Select Your Language

Notifications

webdunia
webdunia
webdunia
webdunia

ನೀವು ಧೂಮಪಾನಿಗಳೇ? ಹಾಗಿದ್ದರೆ ನಿಮಗೆ ಈ ಅಪಾಯ ತಪ್ಪಿದ್ದಲ್ಲ!

ನೀವು ಧೂಮಪಾನಿಗಳೇ? ಹಾಗಿದ್ದರೆ ನಿಮಗೆ ಈ ಅಪಾಯ ತಪ್ಪಿದ್ದಲ್ಲ!
ಬೆಂಗಳೂರು , ಶುಕ್ರವಾರ, 11 ಆಗಸ್ಟ್ 2017 (09:15 IST)
ಬೆಂಗಳೂರು: ಒತ್ತಡದ ಜೀವನದ ಪ್ರಭಾವವೋ, ಆಧುನಿಕತೆಯ ಸೋಗೋ ಒಟ್ಟಾರೆ ಇಂದಿನ ಯುವ ಜನಾಂಗ ಧೂಮಪಾನದಂತಹ ಕೆಟ್ಟ ಚಟದತ್ತ ವಾಲುವುದು ಹೆಚ್ಚಾಗಿದೆ. ಆದರೆ ಧೂಮಪಾನ ಮಾಡುವವರಿಗೆ ರಾಷ್ಟ್ರೀಯ ಅಂಕಿ ಅಂಶವೊಂದು ಅಪಾಯಕಾರಿ ಸತ್ಯ ತಿಳಿಸಿದೆ.


ಧೂಮಪಾನಿಗ ಮಾನಸಿಕ ಆರೋಗ್ಯ ಬೇಗನೇ ಹದಗೆಡುವ ಅಪಾಯವಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಧೂಮಪಾನದಿಂದ ಕಾರ್ಬಮ್ ಮೊನೋಕ್ಸೈಡ್ ನಮ್ಮ ದೇಹ ಪ್ರವೇಶಿಸುತ್ತದೆ. ಇದು ನಮ್ಮ ಮಾನಸಿಕ ಆರೋಗ್ಯ ಹಾಳು ಮಾಡುವುದಲ್ಲದೆ, ಮಾರಣಾಂತಿಕ ರೋಗಗಳಿಗೂ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.

ಧೂಮಪಾನಿಗಳಲ್ಲಿ ಅಧಿಕ ಮಾನಸಿಕ ಒತ್ತಡದದಂತಹ ಖಾಯಿಲೆ ಸಾಮಾನ್ಯ.  ಅಲ್ಲದೆ ಧೂಮಪಾನದಿಂದ ಪಕ್ಷಪಾತ, ಕ್ಯಾನ್ಸರ್, ಹೃದಯ ಖಾಯಿಲೆಯಂತಹ ಮಾರಣಾಂತಿಕ ರೋಗಗಳು ಬರುವ ಅಪಾಯ ಹೆಚ್ಚು. ಅಷ್ಟೇ ಅಲ್ಲದೆ, ತಲೆನೋವು, ಮೂಡ್ ಬದಲಾವಣೆ, ನಿದ್ರಾಹೀನತೆಯಂತಹ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಹಾಗಾಗಿ ಧೂಮಪಾನಿಗಳು ಎಚ್ಚರವಾಗಿರುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೆಡ್ ಬಗ್ಗೆ ನಿಮಗೆ ಗೊತ್ತಿರದ ಶಾಕಿಂಗ್ ವಿಷಯಗಳು!