ಬೆಂಗಳೂರು: ಮಧುಮೇಹಕ್ಕೆ ಹಲವಾರು ಮನೆ ಮದ್ದುಗಳಿವೆ. ನಮ್ಮ ಅಡುಗೆ ಮನೆಯಲ್ಲಿ ಬಳಸುವ ಅನೇಕ ಪದಾರ್ಥಗಳು ಮಧುಮೇಹ ನಿಯಂತ್ರಿಸುತ್ತದೆ.
ಅವುಗಳಲ್ಲಿ ಚಕ್ಕೆಯೂ ಒಂದು ಎಂದರೆ ನೀವು ನಂಬಲೇ ಬೇಕು. ಫಲಾವ್, ಕೂರ್ಮ ಇತ್ಯಾದಿಗಳನ್ನು ಮಾಡಲು ಬಳಸುವ ಚಕ್ಕೆಗೆ ಮಧುಮೇಹ ನಿಯಂತ್ರಿಸುವ ಗುಣವಿದೆಯಂತೆ.
ಇದು ನಮ್ಮ ದೇಹದಲ್ಲಿ ಅಧಿಕ ಸಿಹಿ ಅಂಶ ಸೇರಿಕೊಳ್ಳುವುದನ್ನು ನಿಯಂತ್ರಿಸುತ್ತದೆ ಎನ್ನುತ್ತಾರೆ ತಜ್ಞರು. ಪ್ರತೀ ದಿನ ಚಕ್ಕೆಯ ಪುಡಿ ಮಾಡಿಕೊಂಡು 3 ರಿಂದ 6 ಗ್ರಾಂನಷ್ಟು ಸೇವಿಸುತ್ತಾ ಬನ್ನಿ. ಇದು ನಮ್ಮ ದೇಹದಲ್ಲಿರುವ ಅಧಿಕ ಗ್ಲುಕೋಸ್ ಅಂಶವನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಕೊಬ್ಬಿನಂಶವನ್ನೂ ಕಡಿಮೆ ಮಾಡುತ್ತದೆ.