Publish Date: Mon, 07 Aug 2017 (08:37 IST)
Updated Date: Mon, 07 Aug 2017 (08:39 IST)
ಬೆಂಗಳೂರು: ತಾಮ್ರದ ಪಾತ್ರೆಗಳು ಈಗಿನ ಕಾಲದಲ್ಲಿ ಬಳಕೆ ಕಡಿಮೆಯಾಗಿದ್ದರೂ, ಕೆಲವೆಡೆ ಅಲಂಕಾರಿಕವಾಗಿ ತಾಮ್ರದ ಪಾತ್ರೆಯಲ್ಲಿ ಪಾನೀಯ ನೀಡುತ್ತಾರೆ.
ಈ ರೀತಿ ತಾಮ್ರದ ಪಾತ್ರೆಯಲ್ಲಿ ಪಾನೀಯ ಸೇವಿಸುವ ಮೊದಲು ಹುಷಾರಾಗಿರಿ. ತಾಮ್ರದ ಪಾತ್ರೆ ನೋಡಲು ಆಕರ್ಷಕವಾಗಿದ್ದರೂ, ಅದರಲ್ಲಿ ಪಾನೀಯ ಸೇವಿಸುವುದು ಖಂಡಿತಾ ಒಳ್ಳೆಯದಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.
ಯಾಕೆಂದರೆ ಇದರಲ್ಲಿ ಪಿಎಚ್ ಲೆವೆಲ್ 6.0 ಗಿಂತಲೂ ಕಡಿಮೆಯಿರುತ್ತದೆ. ಇದು ಆರೋಗ್ಯಕ್ಕೆ ತೀರಾ ಹಾನಿಕಾರಕ. ಅದರ ಬದಲು, ತಾಮ್ರದ ಬಿಂದಿಗೆಯ ಒಳಗೆ ಸ್ಟೀಲ್ ಕೋಟ್ ಇರುವ ಪಾತ್ರೆಯಲ್ಲಿ ಪಾನೀಯ ಸೇವಿಸುವುದಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಅಧ್ಯಯನವೊಂದು ಹೇಳಿದೆ.