Publish Date: Fri, 04 Aug 2017 (11:12 IST)
Updated Date: Fri, 04 Aug 2017 (11:16 IST)
ಬೆಂಗಳೂರು: ಸತತ ಎರಡು ದಿನದಿಂದ ಐಟಿ ಅಧಿಕಾರಿಗಳ ತಪಾಸಣೆಯಿಂದ ತೀವ್ರ ಒತ್ತಡಕ್ಕೊಳಗಾಗಿರುವ ಸಚಿವ ಡಿಕೆ ಸಿವಕುಮಾರ್ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ.
ಡಿಕೆಶಿ ಕುಟುಂಬ ವೈದ್ಯ ಡಾ. ರಮಣ್ ರಾವ್ ಮತ್ತು ಇನ್ನೊಬ್ಬ ವೈದ್ಯರು ಡಿಕೆ ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ತಪಾಸಣೆ ನಡೆಸಲು ಭೇಟಿ ಕೊಟ್ಟಿದ್ದಾರೆ.
ಐಟಿ ದಾಳಿಯಿಂದ ಹೊರಗಿನ ಸಂಪರ್ಕಕ್ಕೆ ಅವಕಾಶವಿಲ್ಲದೇ, ಅಕ್ಷರಶಃ ಗೃಹಬಂಧನದಲ್ಲಿರುವ ಸಚಿವರಿಗೆ ರಕ್ತದೊತ್ತಡದಲ್ಲಿ ಏರುಪೇರಾಗಿರಬಹುದು ಎಂದು ಅಂದಾಜಿಸಲಾಗಿದೆ. ಸಕ್ಕರೆ ಖಾಯಿಲೆಯಿಂದಲೂ ಬಳಲುತ್ತಿರುವ ಡಿಕೆಶಿ ಆರೋಗ್ಯ ತಪಾಸಣೆಗೆ ಐಟಿ ಅಧಿಕಾರಿಗಳು ವೈದ್ಯರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
Krishnaveni
Publish Date: Fri, 04 Aug 2017 (11:12 IST)
Updated Date: Fri, 04 Aug 2017 (11:16 IST)