Publish Date: Fri, 12 Jul 2019 (08:59 IST)
Updated Date: Fri, 12 Jul 2019 (09:01 IST)
ಬೆಂಗಳೂರು: ವಯಸ್ಸಾದ ಹಾಗೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುವುದಕ್ಕೆ ಕಾರಣಗಳು ಏನು ಎಂಬುದರ ಬಗ್ಗೆ ವಿದೇಶೀ ಅಧ್ಯಯನಕಾರರು ಸಮೀಕ್ಷೆ ನಡೆಸಿದ್ದಾರೆ.
ಇದುವರೆಗೆ ವಯಸ್ಸಾದ ಹಾಗೆ ದೈಹಿಕ ಕಾರಣಗಳಿಂದ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುತ್ತದೆ ಎಂಬ ನಂಬಿಕೆಯಿತ್ತು. ಆದರೆ ಈಗ ನಡೆಸಿದ ಹೊಸ ಅಧ್ಯಯನದಿಂದ ಇದು ಕೇವಲ ದೈಹಿಕ ಕಾರಣಗಳಿಂದ ಮಾತ್ರವಲ್ಲ, ಮಾನಸಿಕ ಕೀಳರಿಮೆಯಿಂದಲೂ ಆಗುತ್ತದೆ ಎನ್ನಲಾಗಿದೆ.
ವಯಸ್ಸಾದ ಹಾಗೆ ಮಹಿಳೆಯರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ, ಸಾಮರ್ಥ್ಯದ ಬಗ್ಗೆ ಕೀಳರಿಮೆ ಉಂಟಾಗುತ್ತದೆ. ಇದರಿಂದಾಗಿ ದೈಹಿಕ ಸಂಪರ್ಕಕ್ಕೆ ಹಿಂದೇಟು ಹಾಕುತ್ತಾರೆ ಎಂದು ಅಧ್ಯಯನ ಹೇಳಿದೆ.