Publish Date: Sat, 10 Feb 2018 (08:52 IST)
Updated Date: Sat, 10 Feb 2018 (08:54 IST)
ಬೆಂಗಳೂರು: ಮಧುರ ಮಿಲನದ ರಹದಾರಿ ಎಂದರೆ ಇಬ್ಬರಲ್ಲೂ ಸಮಾನ ಆಸಕ್ತಿಯಿರಬೇಕು. ಲೈಂಗಿಕ ನಿರಾಸಕ್ತಿಗೆ ಕೆಲವು ಕಾರಣಗಳಿವೆ. ಅವು ಯಾವುವು ನೋಡೋಣ.
ಚಿಂತೆ ತುಂಬಿದ ಮನ
ಹೆಚ್ಚಾಗಿ ಮಹಿಳೆಯರು ಹಲವು ಕೆಲಸಗಳ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಚಿಂತೆಗಳಿಂದ ತುಂಬಿದ ಮನಸ್ಸಿನಿಂದ ಪಲ್ಲಂಗವೇರಿದರೆ ಸೆಕ್ಸ್ ಆಸಕ್ತಿ ಮೂಡದು.
ಔಷಧ
ಕೆಲವು ಔಷಧಗಳು ನಮಗೆ ಕೆಲಸದಲ್ಲಿ ನಿರಾಸಕ್ತಿ, ಸುಸ್ತು, ಇನ್ನಿತರ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಖಿನ್ನತೆ, ಒತ್ತಡಗಳಿದ್ದರೆ ಸೆಕ್ಸ್ ಲೈಫ್ ನಲ್ಲಿ ಆಸಕ್ತಿ ಇರದು.
ನಿರ್ಜಲೀಕರಣ
ದೇಹ ನಿರ್ಜಲೀಕರಣಕ್ಕೊಳಗಾದರೆ ಏನೆಲ್ಲಾ ಅವಾಂತರವಾಗುತ್ತವೆ ನೋಡಿ. ದೇಹ ನಿರ್ಜಲೀಕರಣಕ್ಕೊಳಗಾದರೆ ಯೋನಿಯೂ ಒಣಗಿದಂತಾಗುತ್ತದೆ. ಇದರಿಂದ ಸೆಕ್ಸ್ ಸಂದರ್ಭ ನೋವುಂಟಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ