Publish Date: Thu, 07 Nov 2019 (09:17 IST)
Updated Date: Thu, 07 Nov 2019 (09:19 IST)
ಬೆಂಗಳೂರು: ವಯಸ್ಸಾದಂತೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುವುದು ಸಹಜ. ಅದೇ ರೀತಿ ಪುರುಷರಲ್ಲಿ ಲೈಂಗಿಕಾಸಕ್ತಿ ಕುಗ್ಗಲು ಕಾರಣವೇನು ಗೊತ್ತಾ?
ಮಧುಮೇಹ, ರಕ್ತದೊತ್ತಡ ಮುಂತಾದ ಸಮಸ್ಯೆಗಳು ಪುರುಷರಲ್ಲಿ ಲೈಂಗಿಕಾಸಕ್ತಿ ಕುಗ್ಗಲು ಕಾರಣವಾಗಬಹುದು. ಇದ್ದಕ್ಕಿದ್ದಂತೆ ಪುರುಷರಲ್ಲಿ ಲೈಂಗಿಕಾಸಕ್ತಿ ಕುಗ್ಗಿದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಅದರ ನಿಜ ಕಾರಣವನ್ನು ಪತ್ತೆ ಮಾಡಬೇಕು. ಕೆಲವು ಅಧ್ಯಯನಗಳ ಪ್ರಕಾರ ಹೃದಯ ಸಂಬಂಧೀ ಸಮಸ್ಯೆಯಿದ್ದರೂ ಲೈಂಗಿಕಾಸಕ್ತಿ ಕುಗ್ಗುತ್ತದೆ ಎಂದು ತಜ್ಞರು ಹೇಳುತ್ತಾರೆ.