Publish Date: Tue, 16 Aug 2022 (08:40 IST)
Updated Date: Tue, 16 Aug 2022 (09:14 IST)
ಬೆಂಗಳೂರು: ನಾವು ತೀವ್ರ ದುಃಖದಲ್ಲಿದ್ದಾಗ, ಒತ್ತಡದಲ್ಲಿದ್ದಾಗ ನಮ್ಮ ಆಪ್ತರ ಒಂದು ಸಾಂತ್ವನದ ಮಾತು ನಮಗೆ ಸಮಾಧಾನ ಕೊಡುತ್ತದೆ.
ಅದಕ್ಕಿಂತ ಹೆಚ್ಚು ಒತ್ತಡದಲ್ಲಿದ್ದಾಗ ಪ್ರೀತಿಯ ಅಪ್ಪುಗೆ, ಚುಂಬನ ನಮ್ಮ ಒತ್ತಡವನ್ನು ಸಾಕಷ್ಟು ಕಡಿಮೆ ಮಾಡುತ್ತದೆ ಎಂದು ತಜ್ಞರೇ ಹೇಳುತ್ತಾರೆ. ಪ್ರೀತಿ ಪಾತ್ರರ ಜೊತೆಗೆ ಕೆಲ ಹೊತ್ತು ಮೌನವಾಗಿ ಕೂರುವುದು ಅಥವಾ ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚು ಅವರಿಂದ ಸಿಗುವ ಅಪ್ಪುಗೆ ಅಥವಾ ಚುಂಬನ ನಮಗೆ ಹೊಸ ಚೈತನ್ಯ ಕೊಡುತ್ತದಂತೆ.
ಆದರೆ ನೆನಪಿರಲಿ, ಆ ಅಪ್ಪುಗೆ, ಚುಂಬನ ನಾವು ಇಷ್ಟಪಟ್ಟವರು ನೀಡಿದವರೆ ಮಾತ್ರ ಸಾಂತ್ವನ ಸಿಗಬಹುದು! ಪ್ರೀತಿ ಪಾತ್ರರ ದೈಹಿಕ ಸ್ಪರ್ಶ ನಮಗೆ ಉತ್ತೇಜನ ನೀಡುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.