Publish Date: Thu, 17 May 2018 (12:49 IST)
Updated Date: Thu, 17 May 2018 (12:53 IST)
ಸಾಮಾನ್ಯವಾಗಿ ದಪ್ಪಗಿರುವವರಿಗೆ ತೆಳ್ಳಗಾಗುವ ಆಸೆ ಇದ್ದೆ ಇರುತ್ತದೆ ಅದಕ್ಕಾಗಿ ಹಲವಾರು ಬಗೆಯ ಔಷಧಿಗಳನ್ನು ಸೇವಿಸಿರುತ್ತಾರೆ, ಅದರಿಂದ ಯಾವುದೇ ಪ್ರಯೋಜನಗಳು ಸಿಗದೇ ಬೇಸರವಾಗಿರುತ್ತಾರೆ ಅಂತವರು ಇನ್ನು ಮುಂದೆ ಚಿಂತಿಸುವ ಅವಶ್ಯಕತೆ ಇಲ್ಲ, ಕೇವಲ ಜ್ಯೂಸ್ ಕುಡಿದು ತಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳ ಬಹುದು, ಇದು ತೂಕ ಕಡಿಮೆ ಮಾಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ ಉತ್ತಮ.
ಜ್ಯೂಸ್ ತಯಾರಿಸುವ ವಿಧಾನ :
* ಅರ್ಧ ನಿಂಬೆಹಣ್ಣು
* ಒಂದು ಸೌತೆಕಾಯಿ
* ಒಂದು ಚಮಚ ಹೆಚ್ಚಿದ ಶುಂಠಿ
* ಒಂದು ಹಿಡಿಯಷ್ಟು ಅಜ್ವಾನದ ಎಲೆ
* ಒಂದು ಕಪ್ ನಷ್ಟು ನೀರು
ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಜ್ಯೂಸ್ ತಯಾರಿಸಿಕೊಳ್ಳಿ. ಈ ಜ್ಯೂಸ್ ಅನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಹೀಗೆ ಮಾಡುವುದರಿಂದ ದೇಹದ ಟಾಕ್ಸಿನ್ಗಳೆಲ್ಲ ಹೊರಹೋಗುತ್ತವೆ. ದೇಹದ ಮೆಟಬಾಲಿಸಂ ಹಾಗು ಇಮ್ಯುನಿಟಿ ಯನ್ನು ಈ ಜ್ಯೂಸ್ ಹೆಚ್ಚಿಸುತ್ತದೆ. ಕೊಬ್ಬು ಕೂಡ ಕರಗುತ್ತದೆ.