Select Your Language

Notifications

webdunia
webdunia
webdunia
webdunia

ವಾಸ್ತವದಲ್ಲಿ ನಿಜವಾಗಿರುವ ಕೆಲವು ವಿಲಕ್ಷಣ ಆರೋಗ್ಯ ಸಲಹೆಗಳು..

ವಾಸ್ತವದಲ್ಲಿ ನಿಜವಾಗಿರುವ ಕೆಲವು ವಿಲಕ್ಷಣ ಆರೋಗ್ಯ ಸಲಹೆಗಳು..

ನಾಗಶ್ರೀ ಭಟ್

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (18:24 IST)
ನಿಮಗೆ ನೋಡಲು ವಿಲಕ್ಷಣವಾದ ಆರೋಗ್ಯ ಸಲಹೆಗಳು ಎಂದೆನಿಸಿದರೂ ಸಹ ಇವುಗಳು ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅನಿರೀಕ್ಷಿತ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತವೆ. ನೀವು ಚಿಕ್ಕ ಮಕ್ಕಳಾಗಿದ್ದಾಗ ನಿಮ್ಮ ತಾಯಿ ಹಣ್ಣುಗಳ ಬೀಜವನ್ನು ನುಂಗಬೇಡ ಅಥವಾ ಕಿವಿಯಲ್ಲಿ ಸಿಲುಕಿಸಿಕೊಳ್ಳಬೇಡ, ಅದು ಹೊಟ್ಟೆಯಲ್ಲಿ ಅಥವಾ ತಲೆಯಲ್ಲಿ ಗಿಡವಾಗಿ ಮರವಾಗುತ್ತದೆ, ಚೂಯಿಂಗ್ ಗಮ್ ಅನ್ನು ನುಂಗಬೇಡ ಅದು ಕರುಳಿನಲ್ಲಿ ಸಿಲುಕಿಕೊಳ್ಳುತ್ತದೆ ಎಂದು ಹೇಳಿರುತ್ತಾರೆ. ಅದು ಕೇಳಲು ವಿಲಕ್ಷಣ ವಾಗಿದ್ದರೂ ಸಹ ಕೆಲವೊಂದು ಸಲಹೆಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆಗಿರುತ್ತದೆ. ಅಂತಹ ಕೆಲವು ಸಲಹೆಗಳನ್ನು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
* ತಿಂಡಿ ಅಥವಾ ಊಟವಾದ ತಕ್ಷಣವೇ ಹಲ್ಲುಜ್ಜಬಾರದು
 
ಊಟ ಮತ್ತು ಪಾನೀಯಗಳನ್ನು ಸೇವಿಸಿದ ತಕ್ಷಣ, ಅದರಲ್ಲೂ ವಿಶೇಷವಾಗಿ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವಿದ್ದರೆ ತಕ್ಷಣ ಹಲ್ಲುಜ್ಜುವಂತಿಲ್ಲ. ಉದಾ: ಸಿಟ್ರಸ್ ಹಣ್ಣುಗಳು, ಟೊಮೆಟೋಗಳು ಮತ್ತು ಫಿಜಿ ಪಾನೀಯಗಳು. ಹಲ್ಲುಜ್ಜುವುದು ಅಪಘರ್ಷಕ ಕ್ರಿಯೆಯಾಗಿರುವುದರಿಂದ ಆಮ್ಲವು ದಂತ ಕವಚ ಮತ್ತು ಪದರದ ಮೇಲೆ ದಾಳಿ ಮಾಡಲು ಕಾರಣವಾಗಬಹುದಾಗಿದೆ. ಆದ್ದರಿಂದ ಊಟದ ನಂತರ ಹಲ್ಲುಜ್ಜುವ ಮೊದಲು 30 ನಿಮಿಷ ಕಾಯುವುದು ಒಳ್ಳೆಯದು.
 
* ಚಿಕ್ಕ ಸೈಜ್‌ಗೆ ಹೊಂದಿಕೊಳ್ಳಲು ಸ್ನಾಯುಗಳನ್ನು ಬಿಲ್ಡ್ ಮಾಡಿ
 
ಒಂದು ಕಿಲೋಗ್ರಾಂ ಸ್ನಾಯುವು ಒಂದು ಕಿಲೋಗ್ರಾಂ ಕೊಬ್ಬಿಗೆ ಸಮ. ಆದರೆ ಸ್ನಾಯುವು ಹೆಚ್ಚು ಸಾಂದ್ರವಾಗಿರುತ್ತದೆ ಮತ್ತು ಕೊಬ್ಬಿಗಿಂತ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ. ಗುಂಡುಗುಂಡಗಿರುವ ವ್ಯಕ್ತಿಯ ತೂಕದಷ್ಟೇ ಗಟ್ಟಿಮುಟ್ಟಾಗಿ ಮಸಲ್ಸ್ ಅನ್ನು ಹೊಂದಿರುವ ವ್ಯಕ್ತಿ ಏಕೆ ತೂಗುತ್ತಾನೆ ಮತ್ತು ಚಿಕ್ಕ ಸೈಜ್ನ ಜೀನ್ಸ್ ಅವನಿಗೆ ಸರಿಹೊಂದುವ ಸಾಧ್ಯತೆಯೇಕಿದೆ ಎಂಬುದನ್ನು ಇದು ವಿವರಿಸುತ್ತದೆ.
 
* ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಿ
 
ತೂಕ ಕಳೆದುಕೊಳ್ಳಲು ಊಟ ಬಿಡುವುದು ಅಥವಾ ಕ್ಯಾಲೋರಿಯುಕ್ತ ಪದಾರ್ಥಗಳನ್ನು ತಿನ್ನದಿರುವುದನ್ನು ಮಾಡಬೇಡಿ. ಕಾರ್ಬೋಹೈಡ್ರೇಟ್‌ಗಳು ತಾವಾಗಿಯೇ ನಿಮಗೆ ಏನೂ ಮಾಡದೇ ಇರಬಹುದು, ಆದರೆ ಇದು ನಿಮ್ಮ ಬ್ಲಡ್ ಶುಗರ್ ಪ್ರಮಾಣವನ್ನು ಏರಿಸಬಹುದು. ಇದು ನಿಮ್ಮಲ್ಲಿ ಮೊದಲಿಗಿಂತ ಹೆಚ್ಚಿನ ಹಸಿವನ್ನು ಉಂಟುಮಾಡುತ್ತದೆ. ನಿಮ್ಮ ಊಟದಲ್ಲಿ ಶೇಂಗಾ, ಬೆಣ್ಣೆ, ಚೀಸ್ ಮುಂತಾದ ಪ್ರೋಟೀನ್‌ಗಳು ಮತ್ತು ಕೊಬ್ಬಿನ ಅಂಶದಿಂದ ಕೂಡಿದ ಆಹಾರವನ್ನು ಸೇರಿಸಿಕೊಳ್ಳುವುದರಿಂದ ಇದು ನಿಮ್ಮ ಊಟದಲ್ಲಿನ ಕ್ಯಾಲೋರಿಯನ್ನು ಹೆಚ್ಚಿಸಬಹುದು. ಆದರೆ ದೀರ್ಘಾವಧಿಯಲ್ಲಿ ನೀವು ಊಟವನ್ನು ಪೂರ್ಣಗೊಳಿಸಲು ಮತ್ತು ಅದರಿಂದ ತೃಪ್ತರಾಗಲು ಸಹಾಯ ಮಾಡುತ್ತದೆ. ಅದು ನೀವು ಮಧ್ಯ ಮಧ್ಯ ಹೆಚ್ಚು ಆಹಾರ ಸೇವಿಸುವುದನ್ನು ತಪ್ಪಿಸಿ ಕಡಿಮೆ ಕ್ಯಾಲೋರಿಯಾಗುವಂತೆ ಮಾಡುತ್ತದೆ.
 
* ನಿಮ್ಮ ದೇಹವನ್ನು ತಂಪಾಗಿಸಲು ಬಿಸಿ ಪಾನೀಯವನ್ನು ಕುಡಿಯಿರಿ
 
ಭಾರತದಲ್ಲಿ ಬಿಸಿಯಾದ ವಾತವರಣದಲ್ಲಿಯೂ ಬಿಸಿಯಾದ ಚಹಾವನ್ನು ಕುಡಿಯುವುದು ಸರ್ವೇಸಾಮಾನ್ಯವಾಗಿದೆ. ಇದು ಕೆಲವರಿಗೆ ಹುಚ್ಚಂತೆ ಕಾಣಿಸಬಹುದು, ಆದರೆ ಒಂದು ಅಧ್ಯಯನದ ಪ್ರಕಾರ ಬಿಸಿಯಾದ ವಾತಾವರಣದಲ್ಲಿ ನೀವು ಬಿಸಿಯಾದ ಪಾನೀಯವನ್ನು ಸೇವಿಸಿದರೆ ಅದು ತಂಪು ಪಾನೀಯಕ್ಕಿಂತ ವೇಗವಾಗಿ ನಿಮ್ಮನ್ನು ತಂಪಾಗಿಸುತ್ತದೆ. ನೀವು ಬಿಸಿ ಪಾನೀಯವನ್ನು ಕುಡಿಯುವಾಗ ನಿಮ್ಮ ದೇಹ ಹೆಚ್ಚು ಬೆವರನ್ನು ಉತ್ಪಾದಿಸುತ್ತದೆ ಮತ್ತು ಅದು ಆವಿಯಾಗಿ ನಿಮ್ಮನ್ನು ತಂಪಾಗಿಸುತ್ತದೆ.
 
* ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ವ್ಯಾಯಾಮ ಮಾಡಿ
 
ಸಾಮಾನ್ಯವಾಗಿ ದೇಹದ ತೂಕವನ್ನು ಕಳೆದುಕೊಳ್ಳಲು ಮಾತ್ರ ವ್ಯಾಯಾಮ ಎಂದು ನಾವೆಲ್ಲಾ ಅಂದುಕೊಂಡಿರುತ್ತೇವೆ, ಆದರೆ ಅದು ನಿಜವಲ್ಲ. ದೀರ್ಘಾವಧಿಯ ಕೆಲಸದ ನಂತರ ವ್ಯಾಯಾಮ ಬಹುಶಃ ನೀವು ಮಾಡಲು ಬಯಸುವ ವಿಷಯಗಳಲ್ಲಿ ಕೊನೆಯದಾಗಿರುತ್ತದೆ. ಆದರೆ ಅದು ನಿಮಲ್ಲಿ ಶಕ್ತಿಯನ್ನು ತುಂಬುತ್ತದೆ. ವ್ಯಾಯಾಮದ ಮೂಲಕ ನಾವು ದಣಿದ ಜೀವಕೋಶಗಳಿಗೆ ಹೆಚ್ಚು ಆಮ್ಲಜನಕವನ್ನು ನೀಡಿ ಅವುಗಳನ್ನು ಮರುಚಾರ್ಜ್ ಮಾಡಬಹುದು. ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುವ ದೈಹಿಕ ಚಟುವಟಿಕೆಗಳು ಜೀವಕೋಶಗಳಲ್ಲಿ ಶಕ್ತಿಯನ್ನು ಉತ್ಪಾದಿಸುವ ಮೈಟೊಕಾಂಡ್ರಿಯಾದ ದಕ್ಷತೆಯನ್ನು ಹೆಚ್ಚಿಸುತ್ತದೆ.
 
* ಹೃದಯ ರೋಗಿಗಳ ಜೀವವನ್ನು ಉಳಿಸಲು ಫ್ರೀಜ್ ಮಾಡಿ
 
ಹೃದಯ ಸ್ತಂಭನ ರೋಗಿಯ ಕೋರ್ ತಾಪಮಾನವನ್ನು 32.2 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿರಿಸಿ - "ಪ್ರೇರಿತ ಹೈಪೋಥರ್ಮಿಯಾ" ಎಂದು ಕರೆಯಲ್ಪಡುವ, ಶೀತ ಲವಣಯುಕ್ತ ದ್ರಾವಣವನ್ನು ಚುಚ್ಚುಮದ್ದಿನ ಮೂಲಕ ಅವರಿಗೆ ಸೇರಿಸುವುದರಿಂದ ಅಥವಾ ಐಸ್ ಪ್ಯಾಕ್‌ಗಳನ್ನು ಅವರ ಮೇಲೆ ಇರಿಸುವ ಮೂಲಕ ರೋಗಿಯ ಸಂಪೂರ್ಣ ಚೇತರಿಕೆಯ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಹೇಳುತ್ತಾರೆ.
 
* ಟಾಯ್ಲೆಟ್ ಅನ್ನು ಫ್ಲಶ್ ಮಾಡುವ ಮೊದಲು ಅದರ ಮುಚ್ಚಳವನ್ನು ಮುಚ್ಚಿ
 
ನೀವು ಯಾವಾಗಲೂ ಟಾಯ್ಲೆಟ್ ಮುಚ್ಚಳವನ್ನು ಮುಚ್ಚಿಯೇ ಫ್ಲಶ್ ಮಾಡಬೇಕು. ಹಾಗೆ ಮಾಡದೇ ಇದ್ದರೆ ಫ್ಲಶ್ ಮಾಡಿದಾಗ ಉಂಟಾಗುವ ನೀರಿನ ಕಣಗಳು ನಿಮ್ಮ ಬಾತ್‌ರೂಮ್‌ನ ತುಂಬೆಲ್ಲಾ ಹರಡುತ್ತದೆ. ಇದು ನೀವು ಬಳಸುವ ಬ್ರೆಶ್, ಸೋಪು, ಟವೆಲ್ ಮುಂತಾದ ವಸ್ತುಗಳ ಮೇಲೆ ಬೀಳುವ ಸಾಧ್ಯತೆಗಳಿರುತ್ತವೆ.
 
ತಜ್ಞರ ಪ್ರಕಾರ ಫ್ಲಶ್ ಮಾಡುವಿಕೆಯು "ಟಾಯ್ಲೆಟ್ ಪ್ಲಮ್" ಎಂದು ಕರೆಯಲ್ಪಡುವ ಅಗೋಚರವಾದ ಮೋಡವನ್ನು ಸೃಷ್ಟಿಸುತ್ತದೆ ಮತ್ತು ಇದು ಫ್ಲಶ್‌ನ ಬಲದಿಂದ ಗಾಳಿಯಲ್ಲಿ ಹೊರಹಾಕಲ್ಪಡುತ್ತದೆ ಎಂದು ಹೇಳುತ್ತಾರೆ. ಟಾಯ್ಲೆಟ್ ಪ್ಲಮ್ ಫೇಕಲ್ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಇತರ ಸೂಕ್ಷ್ಮಜೀವಿಗಳನ್ನು ಹೊಂದಿರಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇಡ್ಲಿ ಚಾಟ್ ಮಸಾಲಾ