Publish Date: Tue, 02 Mar 2021 (08:57 IST)
Updated Date: Tue, 02 Mar 2021 (08:58 IST)
ಬೆಂಗಳೂರು : ಫಂಕ್ಷನ್ ಗಳಿಗೆ ಹೋಗುವಾಗ ನಾವು ಅಂದವಾಗಿ ಕಾಣಬೇಕು ಎಂದು ಬ್ಯೂಟಿ ಪಾರ್ಲರ್ ಗೆ ಹೋಗಿ ಅಧಿಕ ಹಣ ನೀಡಿ ಗೋಲ್ಡನ್ ಫೇಶಿಯಲ್ ಮಾಡುತ್ತೇವೆ. ಅದರ ಬದಲು ಮುಖ ಬಂಗಾರದಂತೆ ಹೊಳೆಯಲು ಈ ಕ್ರೀಂ ತಯಾರಿಸಿ ಹಚ್ಚಿ.
ನೆನೆಸಿ ಸಿಪ್ಪೆ ತೆಗೆದ 1 ಹಿಡಿ ಬಾದಾಮಿ ಬೀಜ ಮತ್ತು ಸ್ವಲ್ಪ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಹಾಕಿ ಅದಕ್ಕೆ ರೋಸ್ ವಾಟರ್ ಮಿಕ್ಸ್ ಮಾಡಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ತಯಾರಿಸಬೇಕು. ಇದನ್ನು ಕಂಟೇನರ್ ನಲ್ಲಿ ಸ್ಟೋರ್ ಮಾಡಿ ಫ್ರಿಜ್ ನಲ್ಲಿಡಿ. ರಾತ್ರಿ ಮಲಗುವಾಗ ಪ್ರತಿದಿನ ಹಚ್ಚಿಕೊಳ್ಳಿ. ಇದರಿಂದ ಮುಖದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಮುಖ ಚಿನ್ನದಂತೆ ಹೊಳೆಯುತ್ತದೆ.