Publish Date: Sun, 07 Feb 2021 (07:11 IST)
Updated Date: Sun, 07 Feb 2021 (07:12 IST)
ಬೆಂಗಳೂರು : ಕಿತ್ತಳೆ ಸಿಪ್ಪೆ ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ನಿಮ್ಮ ಹಲ್ಲುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಹಲ್ಲುಗಳನ್ನು ಬಿಳುಪುಗೊಳಿಸುತ್ತದೆ.
ಕಿತ್ತಳೆ ಸಿಪ್ಪೆಯಲ್ಲಿರುವ ಲಿಮೊನೆನ್ ಅಂಶ ಹಲ್ಲುಗಳನ್ನು ನೈಸರ್ಗಿಕವಾಗಿ ಬಿಳುಪುಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಕಿತ್ತಳೆ ಸಿಪ್ಪೆಗಳನ್ನು ಎಸೆಯುವ ಬದಲು ಅದನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದರಿಂದ ಹಲ್ಲುಜ್ಜಿ. ಇದರಿಂದ ಹಲ್ಲು ಬಿಳುಪಾಗಿ ಆರೋಗ್ಯವಾಗಿರುತ್ತದೆ.