ಇಂಗಿನ ಆರೋಗ್ಯಕರ ಗುಣಗಳನ್ನು ತಿಳಿಯಿರಿ

Webdunia
ಸೋಮವಾರ, 25 ಅಕ್ಟೋಬರ್ 2021 (09:16 IST)
ಸಾಮಾನ್ಯವಾಗಿ ಇತರ ಮಸಾಲೆಗಳನ್ನು ರುಚಿ ಮತ್ತು ಉತ್ತಮ ಬಣ್ಣಕ್ಕಾಗಿ, ಮಾಡುವ ಅಡುಗೆಯಲ್ಲಿ ಸೇರಿಸಲಾಗುತ್ತದೆ.ಆದರೆ ಇಂಗನ್ನು ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲ ಸುಗಂಧಕ್ಕಾಗಿ ಬಳಸಲಾಗುತ್ತದೆ.
ಇಂಗಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. ಹೊಟ್ಟೆ ಸಮಸ್ಯೆಗಳಿಗೆ ಇಂಗು ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಇಂಗು ವೈರಸ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ.
ಬಿಪಿಯನ್ನು ನಿಯಂತ್ರಿಸುತ್ತದೆ

ಇಂಗಿನಲ್ಲಿ ಇರುವ ಪೋಷಕಾಂಶಗಳು ಬಿಪಿಯನ್ನು ನಿಯಂತ್ರಿಸಲು ಕೆಲಸ ಮಾಡುತ್ತವೆ. ಇವು ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ರಕ್ತವನ್ನು ತೆಳುಗೊಳಿಸುತ್ತದೆ ಹಾಗೂ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಜೀರ್ಣಕ್ರಿಯೆ, ಗ್ಯಾಸ್, ಅಸಿಡಿಟಿ, ಮಲಬದ್ಧತೆ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನೀವು ಹೊಂದಿದ್ದರೆ, ಇಂಗನ್ನು ನಿಯಮಿತವಾಗಿ ಅಡುಗೆಯಲ್ಲಿ ಸೇರಿಸಿ. ಅಲ್ಲದೆ, ಇಂಗನ್ನು ಒಂದು ಚಮಚ ನೀರಿನಲ್ಲಿ ಕದಡಿ ಹೊಟ್ಟೆಯ ಸುತ್ತಲೂ ಉಜ್ಜಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
ಉಸಿರಾಟದ ತೊಂದರೆಗಳಿಗೆ ಪರಿಹಾರ

ಇದು ಆಂಟಿ-ವೈರಲ್ ಮತ್ತು ಉರಿಯೂತದ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದ ಕೆಮ್ಮು, ಆಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ವಿವಿಧ ಉಸಿರಾಟದ ಸಮಸ್ಯೆಗಳು ದೂರವಾಗುತ್ತದೆ. ಇಂಗು ಎದೆಯ ಬಿಗಿತವನ್ನು ನಿವಾರಿಸುವ ಕೆಲಸ ಮಾಡುತ್ತದೆ.
ಹಲ್ಲು ನೋವಿಗೆ ಪರಿಹಾರ

ಇಂಗು ಉರಿಯೂತದ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹಲ್ಲು ನೋವಿಗೆ ಸಾಕಷ್ಟು ಪರಿಹಾರ ನೀಡುತ್ತದೆ.
ಇಂಗು ಬಳಸುವುದು ಹೇಗೆ?
ವಿವಿಧ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಲು ಪ್ರತಿದಿನ ರಾತ್ರಿ ಮಲಗುವ ಮುನ್ನ ಇಂಗು ಪುಡಿ ಬೆರೆಸಿದ ನೀರನ್ನು ಕುಡಿಯಿರಿ. ಅರ್ಧ ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ 2 ಚಿಟಿಕೆ ಇಂಗು ಪುಡಿಯನ್ನು ಬೆರೆಸಿ ಕುಡಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments