Select Your Language

Notifications

webdunia
webdunia
webdunia
webdunia

ತೆಂಗಿನಕಾಯಿಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?

ತೆಂಗಿನಕಾಯಿಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?
ಬೆಂಗಳೂರು , ಭಾನುವಾರ, 24 ಅಕ್ಟೋಬರ್ 2021 (17:16 IST)
ನಮ್ಮ ಮನೆಯಲ್ಲೇ ಸಿಗುವ ತೆಂಗಿನಕಾಯಿಯಿಂದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಾಕಷ್ಟು ಉಪಯೋಗಗಳಿವೆ.
ಚರ್ಮ ಮತ್ತು ಕೂದಲಿನ ಆರೈಕೆಗೆ ಬಂದಾಗ ತೆಂಗಿನಕಾಯಿ ಅದಕ್ಕೆ ಹೇಳಿಮಾಡಿಸಿದ್ದು. ತೆಂಗಿನಕಾಯಿಯಿಂದ ತಯಾರಿಸುವ ಎಣ್ಣೆಯಿಂದ ಕೂದಲು ಮತ್ತು ಚರ್ಮದ ಅಂದ ಹೆಚ್ಚಾಗುತ್ತದೆ.
ತೆಂಗಿನ ಎಣ್ಣೆಯು ಕೂದಲನ್ನು ಕಂಡೀಷನಿಂಗ್ ಮಾಡುವ ಶಕ್ತಿಯನ್ನು ಹೊಂದಿದೆ. ತೆಂಗಿನ ಕಾಯಿಯಲ್ಲಿ ವಿಟಮಿನ್ ಇ ನಂತಹ ಅದರ ವಿವಿಧ ಅಂಶಗಳಿವೆ. ಇದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಹಳ ಹಿಂದಿನಿಂದಲೂ ತೆಂಗಿನೆಣ್ಣೆಯನ್ನು ಚರ್ಮದ ಸೌಂದರ್ಯ ವೃದ್ಧಿಗೆ ಬಳಸಲಾಗುತ್ತಿತ್ತು.
webdunia

ತೆಂಗಿನಕಾಯಿ ಎಣ್ಣೆಯು ಚರ್ಮದ ಅತ್ಯಂತ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ತೆಂಗಿನಕಾಯಿ ಎಣ್ಣೆಯನ್ನು ನಿಯಮಿತವಾಗಿ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಒಣಗುವುದು ತಪ್ಪುತ್ತದೆ. ಚರ್ಮದಲ್ಲಿ ತೇವಾಂಶವಿದ್ದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ.
ಚರ್ಮದಲ್ಲಿ ನೀರಿನ ಅಂಶ ಕಡಿಮೆಯಾಗುವುದನ್ನು ತಡೆಯುವ ಮೂಲಕ ತೆಂಗಿನ ಎಣ್ಣೆಯು ಚರ್ಮವನ್ನು ದೀರ್ಘಕಾಲದವರೆಗೆ ತೇವಗೊಳಿಸಲು ಸಹಾಯ ಮಾಡುತ್ತದೆ. ಪರಿಸರ ಮಾಲಿನ್ಯ, ಕೋವಿಡ್ ಸಮಯದಲ್ಲಿ ಅತಿಯಾದ ನೈರ್ಮಲ್ಯೀಕರಣ ಮತ್ತು ಹವಾಮಾನ ಬದಲಾವಣೆಗಳು ಚರ್ಮದ ಮೇಲ್ಮೈಯನ್ನು ಒಣಗಿಸುತ್ತವೆ. ತೆಂಗಿನ ಎಣ್ಣೆಯು ಚರ್ಮದ ಈ ಅಡ್ಡ ಪರಿಣಾಮಗಳನ್ನು ನಿಭಾಯಿಸಲು ಸರಳ, ಸುಲಭ ಉಪಾಯವಾಗಿದೆ.
ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ತೆಂಗಿನಕಾಯಿ ಎಣ್ಣೆಯನ್ನು ಚರ್ಮ ಬಹಳ ಬೇಗ ಹೀರಿಕೊಳ್ಳುತ್ತದೆ. ನೀವು ದಿನನಿತ್ಯವೂ ದುಬಾರಿ ಹಣ ಕೊಟ್ಟು ಮಾಯಿಶ್ಚರೈಸರ್ ಕ್ರೀಂಗಳನ್ನು ಖರೀದಿಸುವ ಬದಲು ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡರೆ ಇನ್ನಷ್ಟು ಒಳ್ಳೆಯದು. ಕಡಿಮೆ ತೂಕದೊಂದಿಗೆ ಹುಟ್ಟಿದ ಮಗುವಿನ ಚರ್ಮದ ಆರೋಗ್ಯ ಸುಧಾರಿಸಲು ತೆಂಗಿನೆಣ್ಣೆ ಅನುಕೂಲಕರವಾಗಿದೆ. ತೆಂಗಿನಕಾಯಿ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಚರ್ಮದ ಆರೋಗ್ಯ ಉತ್ತಮವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಎಷ್ಟು ಅವಶ್ಯಕ?