Publish Date: Tue, 08 Sep 2026 (13:37 IST)
Updated Date: Tue, 08 Sep 2026 (13:41 IST)
ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗಿ ಹೊಟ್ಟೆ ಮುಂಭಾಗಕ್ಕೆ ಬರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಇದನ್ನು ಕಂಟ್ರೋಲ್ ಮಾಡಲು ಮತ್ತು ಬೊಜ್ಜು ಕರಗಿಸಲು ಈ ಕೆಳಗಿನ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಿ:
ಪ್ರತಿ 45 ನಿಮಿಷಕ್ಕೊಮ್ಮೆ ಬ್ರೇಕ್ ತಗೊಳ್ಳಿ
ಸತತವಾಗಿ ಕುಳಿತುಕೊಳ್ಳಬೇಡಿ. ಪ್ರತಿ 30 ರಿಂದ 45 ನಿಮಿಷಕ್ಕೊಮ್ಮೆ ಎದ್ದು 2-3 ನಿಮಿಷಗಳ ಕಾಲ ನಡೆಯಿರಿ ಅಥವಾ ಹಗುರವಾದ ಸ್ಟ್ರೆಚಿಂಗ್ ಮಾಡಿ.
ಫೋನ್‌ನಲ್ಲಿ ಮಾತನಾಡುವಾಗ ನಿಂತುಕೊಂಡು ಅಥವಾ ನಡೆಯುತ್ತಾ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ.
ನಿತ್ಯ 30 ನಿಮಿಷಗಳ ವ್ಯಾಯಾಮ
ವಾಕಿಂಗ್: ದಿನಕ್ಕೆ ಕನಿಷ್ಠ 30 ರಿಂದ 40 ನಿಮಿಷ ವೇಗವಾಗಿ ನಡೆಯಿರಿ.
ಕೋರ್ ವ್ಯಾಯಾಮಗಳು : ಪ್ಲ್ಯಾಂಕ್ , ಕ್ರಂಚಸ್, ಸೈಕ್ಲಿಂಗ್ ಕ್ರಂಚಸ್ ಮತ್ತು ಲೆಗ್ ರೈಸ್‌ನಂತಹ ವ್ಯಾಯಾಮಗಳು ಹೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಲು ನೆರವಾಗುತ್ತವೆ.
ನಂತರ ಆಹಾರ ಪದ್ಧತಿಯಲ್ಲೂ ಬದಲಾವಣೆ ಮಾಡಿಕೊಳ್ಳಿ. ಆದಷ್ಟು ಫೈಬರ್ ಯುಕ್ತ ಆಹಾರ ಸೇವನೆ ಮಾಡಿ. ಅಧಿಕ ಕೊಬ್ಬಿನಂಶವಿರುವ, ಜಿಡ್ಡಿನಂಶದ ಆಹಾರಗಳನ್ನು ಅವಾಯ್ಡ್ ಮಾಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ