Select Your Language

Notifications

webdunia
webdunia
webdunia
webdunia

ಗರ್ಭಾವಸ್ಥೆಯಲ್ಲಿ ಎಳ್ಳು ತಿಂದರೆ ಮಗುವಿಗೆ ಅಪಾಯವೇ?

ಗರ್ಭಾವಸ್ಥೆಯಲ್ಲಿ ಎಳ್ಳು ತಿಂದರೆ ಮಗುವಿಗೆ ಅಪಾಯವೇ?
ಬೆಂಗಳೂರು , ಶನಿವಾರ, 28 ನವೆಂಬರ್ 2020 (17:17 IST)
ಬೆಂಗಳೂರು :  ಗರ್ಭಾವಸ್ಥೆಯಲ್ಲಿ ಮಹಿಳೆಯರು ಆಹಾರದ ಕಡೆಗೆ ಹೆಚ್ಚು ಗಮನಕೊಡಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ನಮ್ಮ ಹಿರಿಯರು  ಗರ್ಭಾವಸ್ಥೆಯಲ್ಲಿ ಮಹಿಳೆಯರು ಎಳ್ಳು ತಿಂದರೆ ಮಗುವಿನ ಜೀವಕ್ಕೆ ಅಪಾಯವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ.

ಎಳ್ಳು ತಿನ್ನುವುದರಿಂದ ಗರ್ಭಪಾತವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದರಲ್ಲಿ ಅಗತ್ಯವಾದ ಪೋಷಕಾಂಶಗಳಾದ ಕಬ್ಬಿಣ, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ , ಮೆಗ್ನಿಶಿಯಂ ಮತ್ತು ಪೊಟ್ಯಾಶಿಯಂ ಇರುತ್ತದೆ. ಇದು ತಾಯಿ ಮತ್ತು ಮಗುವಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಆದರೆ ಗರ್ಭಿಣಿಯರಿಗೆ ವಾಕರಿಕೆ ಇರುವ ಕಾರಣ ಮೊದಲ ತ್ರೈಮಾಸಿಕದಲ್ಲಿ ಎಳ್ಳು ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ. ಆದರೆ ಆ ನಂತರ ನಿಯಮಿತವಾಗಿ ತಿಂದರೆ ತುಂಬಾ ಒಳ್ಳೆಯದು. ಹಾಗೂ ಎಳ್ಳು ಅಲರ್ಜಿ ಇರುವವರು ಸೇವಿಸಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಲು ಈ ಆಹಾರವನ್ನು ಸೇವಿಸಿ