ಬೆಂಗಳೂರು : ಕಿವಿ ಒಂದು ಸೂಕ್ಷ್ಮವಾದ ಅಂಗ. ಇದರಲ್ಲಿ ಧೂಳು ಮತ್ತು ಸೋಂಕು ಸೇರಿದಾಗ ತುರಿಕೆ ಉಂಟಾಗುತ್ತದೆ. ಈ ತುರಿಕೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಮೊದಲಿಗೆ ಕಿವಿಯಲ್ಲಿ ನೀರು ಹೋದರೆ ಕ್ಲೀನ್ ಮಾಡಿಕೊಳ್ಳಿ. ಯಾಕೆಂದರೆ ತೇವಾಂಶವಿದ್ದ ಕಡೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ಬೇಗನೆ ಬೆಳೆಯುವುದು. ಇದರಿಂದಾಗಿ ಕಿವಿಯಲ್ಲಿನ ತುರಿಕೆ ಉಂಟಾಗುತ್ತದೆ.
ಬೆಳ್ಳುಳ್ಳಿ ಎಣ್ಣೆ ಕಿವಿ ಒಳಗಡೆ ಇರುವಂತಹ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ತುಂಬಾ ಸೂಕ್ಷ್ಮವಾಗಿ ಕೊಂದು ಹಾಕುವುದು. ಸ್ವಲ್ಪ ಬೆಳ್ಳುಳ್ಳಿ ಎಣ್ಣೆಯನ್ನು ಬಿಸಿ ಮಾಡಿ ಅದು ಉಗುರು ಬೆಚ್ಚಗೆ ಇರುವ ವೇಳೆ ಅದನ್ನು ಕಿವಿಗೆ ಹನಿ ಹನಿಯಾಗಿ ಹಾಕಿಕೊಳ್ಳಿ.
ಬಿಳಿ ವಿನೇಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮೂರು ದಿನಗಳ ಕಾಲ ಪ್ರತೀ ದಿನ ಕಿವಿಗೆ ಹಾಕಿಕೊಳ್ಳಿ. ಒಂದು ಸಲ ನೀವು ಎರಡು ಹನಿ ಮಾತ್ರ ಹಾಕಿಕೊಳ್ಳಿ. ಇದರಿಂದ ಕಿವಿಯಲ್ಲಿ ಉಂಟಾಗಿರುವಂತಹ ತುರಿಕೆ ಕಡಿಮೆ ಆಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.