Webdunia - Bharat's app for daily news and videos

Install App

ಮದುವೆಯಾಗಿ ವರ್ಷವಾದರೂ ಗಂಡನಿಂದ ತೃಪ್ತಿ ಸಿಕ್ಕಿಲ್ಲ

Webdunia
ಸೋಮವಾರ, 18 ಮಾರ್ಚ್ 2019 (19:07 IST)
ಪ್ರಶ್ನೆ: ಮದುವೆಯಾಗಿ ಒಂದು ವರ್ಷ ಆಗುತ್ತಾ ಬಂದಿದೆ. ನಾನು ಈಗ 28 ವರ್ಷದ ಯುವತಿ. ನಮ್ಮ ಮೊದಲ ರಾತ್ರಿಯಂದು ನನ್ನ ಗಂಡ ನನ್ನ ಸೇರಬೇಕೆನ್ನುವಷ್ಟರಲ್ಲಿ ಅವರಿಗೆ ಸ್ಖಲಿಸಿತ್ತು. ಆಮೇಲೆ ಕೂಡ ಅವರಿಗೆ ತುಂಬಾ ಹೊತ್ತು ಸೆಕ್ಸ್ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಖಲಿಸಿದ ನಂತರ ಮಲಗ್ತಾರೆ. ನಾನು ಪ್ರತಿದಿನವೂ ಮತ್ತೊಮ್ಮೆ ಸೆಕ್ಸ್ ಮಾಡುವಂತೆ ಪೀಡಿಸಿದರೂ ಅವರಿಂದ ಅದು ಸಾಧ್ಯವಾಗುತ್ತಿಲ್ಲ. ನಾನು ಕೇವಲ ಒಂದು ಬಾರಿ ಮಾತ್ರ ಗಂಡನೊಂದಿಗೆ ಸೇರುತ್ತಿದ್ದೇನೆ. ಅಂದ್ಹಾಗೆ ಅವರ ಜನನಾಂಗ ಕೂಡ ಸಣ್ಣದಿದೆ. ಹೀಗಾಗಿ ನನಗೆ ಸುಖ ಸಿಗುತ್ತಿಲ್ಲ ಏನು ಮಾಡಲಿ?  ಪರಿಹಾರ ಸೂಚಿಸಿ.

ಸಲಹೆ: 28 ವರ್ಷದ ಯುವತಿ ನೀವಾಗಿದ್ದರೆ ನಿಮ್ಮ ಗಂಡನಿಗೆ 31 ವರ್ಷ ಇರಬೇಕು ಎಂದು ಭಾವಿಸುವೆ. ನಿಮ್ಮ ಗಂಡ ಸೆಕ್ಸ್ ವಿಷಯದಲ್ಲಿ ಹೆದರಿದ್ದಾರೆಂದು ಅನಿಸುತ್ತದೆ. ನಿಮ್ಮ ಮೊದಲ ಮಿಲನದ ಸಮಯದಂದು ನಿಮ್ಮ ಗಂಡ ನಿಮ್ಮನ್ನು ಸೇರುವ ಮುನ್ನವೇ ಸ್ಖಲಿಸಿದ್ದಾರೆಂದರೆ ಅವರಿಗೆ ಶೀಘ್ರಸ್ಖಲನ ದೋಷವಿದೆ ಎಂದು ಹೇಳಲಾಗದು. ನಿಮ್ಮಿಬ್ಬರಿಗೂ ಅದು ಮೊದಲ ಅನುಭವವಾಗಿರುವುದರಿಂದ ಆತಂಕದಿಂದ ಶೀಘ್ರಸ್ಖಲನವಾಗಿದೆಯಷ್ಟೆ

ಪುರುಷನಿಗೆ ಒಮ್ಮೆ ಸ್ಖಲಿಸಿದ ನಂತರ ಅದೇ ಸಮಯದಲ್ಲಿ ಮತ್ತೊಮ್ಮೆ ಸೆಕ್ಸ್ ನಡೆಸಲು ಸಾಧ್ಯವಿಲ್ಲ. ಆತ ಮತ್ತೊಮ್ಮೆ ಸಂಭೋಗ ಮಾಡಬೇಕಾದರೆ ಒಂದರಿಂದ ಎರಡು ಗಂಟೆಯವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಸ್ಖಲಿಸಿದ ತಕ್ಷಣ ಮತ್ತೊಮ್ಮಸೆ ಸೆಕ್ಸ್ ನಡೆಸವುಂತೆ ಒತ್ತಾಯಿಸುವುದು ಸರಿಯಲ್ಲ.

ಶಿಶ್ನ ಎಷ್ಟೇ ಗಾತ್ರದಲ್ಲಿದ್ದರೂ ಅದು ಯೋನಿಗೆ ತಕ್ಕಂತೆ ಹೊಂದಿಕೊಳ್ಳುವುದರಿಂದ ಶಿಶ್ನದ ಗಾತ್ರಕ್ಕೂ, ಸೆಕ್ಸಿಗೂ ಯಾವುದೇ ಸಂಬಂಧವಿಲ್ಲ.  

ಒಮ್ಮೆ ನೀವು ನಿಮ್ಮ ಗಂಡನನ್ನು ಸೆಕ್ಸ್ ವಿಷಯದಲ್ಲಿ ಹೀಯಾಳಿಸಿರುವುದರಿಂದ ಅವರಿಗೆ ಸೆಕ್ಸ್ ಬಗ್ಗೆ ಸಹಜವಾಗಿ ಆತಂಕ ಮೂಡಿರುವದರಿಂದ ಭಯದಿಂದ ಬೇಗ ಸ್ಖಲಿಸಿಬಿಡುತ್ತಾರೆ. ಇದರಿಂದ ನಿಮಗೆ ಬಾಧೆ ತೀರುವುದಿಲ್ಲ. ಬಾಧೆ ತೀರದ ಸಂದರ್ಭ ನೀವು ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ಬಾಧೆ ತೀರಿಸಬಹುದು. ಒಂದು ನೀವು ಹಾಗೆ ಮಾಡಿದ್ದಕ್ಕೆ ನಿಮ್ಮ ಗಂಡ ಅಜ್ಞಾನದಿಂದ ಬೇಸರ ವ್ಯಕ್ತಪಡಿಸಿದ್ದಾರೆ. ಅವರಿಗೆ ಬಗ್ಗೆ ವಿವರಿಸುವ ಅಗತ್ಯವಿದೆ.

ಸಾವಕಾಶದಿಂದ, ಯಾವುದೇ ಆತಂಕವಿಲ್ಲದೆ ಸೆಕ್ಸ್ ಮಾಡಿದರೆ ಅಥವಾ ಪುರುಷ ಸ್ಖಲಿಸುವ ಸಂದರ್ಭ ಸೆಕ್ಸ್ ಹೊರತಾದ ಯೋಚನೆ ಮಾಡುವ ಮೂಲಕ ಸ್ಖಲನದಿಂದ ತಪ್ಪಿಸಬಹುದು. ಸ್ಖಲನವಾಗುವ ಸಂದರ್ಭ ಜನನಾಂಗದಿಂದ ಶಿಶ್ನವನ್ನು ಹೊರತೆಗೆದು ಸ್ವಲ್ಪ ಸಮಯ ಸಂಭೋಗ ನಿಲ್ಲಿಸಿ ಮತ್ತೊಮ್ಮೆ ಸೆಕ್ಸ್ ಮಾಡುವ ಮೂಲಕ ಬಾಧೆಯಿಂದ ಹೊರಬರಬಹುದು
ಶೀಘ್ರ ಸ್ಖಲನದಿಂದ ಮುಕ್ತರಾಗಲು ವಯಾಗ್ರದಂಥಾ ಮಾತ್ರೆಗಳಿವೆ. ಅಲ್ಲದೆ ಶಿಶ್ನಕ್ಕೆಂದೇ ಸಿಂಪಡಿಸುವ ಸ್ಪ್ರೇಗಳಿವೆ. ಇದನ್ನು ಲೈಂಗಿಕ ತಜ್ಞರ ಸಲಹೆ ಸೂಚನೆಗಳಿಗನುಸಾರ ಉಪಯೋಗಿಸಬಹುದು.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ