Publish Date: Tue, 20 Aug 2019 (09:39 IST)
Updated Date: Tue, 20 Aug 2019 (09:42 IST)
ಬೆಂಗಳೂರು: ಇದು ಹೆಚ್ಚಾಗಿ ಲವ್ ಮ್ಯಾರೇಜ್ ಆದ ಸಂದರ್ಭದಲ್ಲಿ ಎಲ್ಲಾ ಪುರುಷರಿಗೂ ಎದುರಾಗುವ ಸಮಸ್ಯೆ. ಕೇವಲ ಪತ್ನಿಯನ್ನು ಇಂಪ್ರೆಸ್ ಮಾಡಿದರೆ ಸಾಲದು. ಅತ್ತೆ ಮಾವಂದಿರಿಂದಲೂ ಗೌರವ ಗಳಿಸಬೇಕು.
ಇದಕ್ಕಾಗಿ ಮಾಡಬೇಕಾಗಿರುವುದು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಯ ಇಷ್ಟ ಕಷ್ಟಗಳಿಗೆ ಜತೆಯಾಗಿ ಉತ್ತಮ ಸಂಗಾತಿ ಎನಿಸಿಕೊಳ್ಳಬೇಕು. ಅದರ ಜತೆಗೆ ಅತ್ತೆ ಮಾವ ಏನೇ ಬೇಸರಗೊಂಡಿದ್ದರೂ ಅವರ ಜತೆ ಕೂತು ಮಾತನಾಡಿ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಯಾವ ರೀತಿ ನಡೆದುಕೊಳ್ಳಬಹುದು ಎಂದು ತಿಳಿದುಕೊಳ್ಳಬೇಕು. ಅವರನ್ನೂ ತನ್ನ ಪೋಷಕರಂತೇ ನೋಡಿಕೊಂಡರೆ ಮುಂದೊಂದು ದಿನ ಖಂಡಿತವಾಗಿಯೂ ಅವರು ನಿಮ್ಮನ್ನೂ ಸ್ವೀಕರಿಸುತ್ತಾರೆ.