Publish Date: Tue, 20 Aug 2019 (09:31 IST)
Updated Date: Tue, 20 Aug 2019 (09:35 IST)
ಬೆಂಗಳೂರು: ಪುರುಷರು ತಮ್ಮ ತಲೆಯಲ್ಲಿ ಕೂದಲು ಇಲ್ಲ ಎಂದು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಬೊಕ್ಕ ತಲೆಯ ಪುರುಷರೆಂದರೆ ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತಾರಂತೆ! ಹಾಗಂತ ಅಧ್ಯಯನವೊಂದು ಹೇಳಿದೆ.
ಬೊಕ್ಕ ತಲೆಯ ಪುರುಷರು ಹೆಚ್ಚು ಬುದ್ಧಿವಂತರು, ಪ್ರಭಾವಿಗಳೂ ಆಗಿರುತ್ತಾರೆ. ಇಂತಹ ಪುರುಷರೆಂದರೆ ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತದಂತೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನ ಮಹಿಳೆಯರೂ ಇದೇ ಅಭಿಪ್ರಾಯಪಟ್ಟಿದ್ದಾರಂತೆ.
ಅಷ್ಟೇ ಅಲ್ಲ, ಬೊಕ್ಕ ತಲೆಯವರು ಹೆಚ್ಚು ಆಕರ್ಷಕವಾಗಿ ಕಾಣುತ್ತಾರಂತೆ. ಅಲ್ಲದೆ ಇವರು ಲೈಂಗಿಕವಾಗಿ ಹೆಚ್ಚು ಸಮರ್ಥರು ಎಂದೂ ಹೇಳಲಾಗಿದೆ. ಹಾಗಾಗಿ ತಲೆಯಲ್ಲಿ ಕೂದಲು ಇಲ್ಲ ಎಂದು ಪುರುಷರು ಇನ್ನು ಕೊರಗುವುದು ಬೇಕಿಲ್ಲ.