Webdunia - Bharat's app for daily news and videos

Install App

ಸರಳವಾದ ವಿಧಾನಗಳನ್ನು ಅನುಸರಿಸಿ ಸುಂದರವಾದ ಕಣ್ಣುಗಳನ್ನು ನಿಮ್ಮದಾಗಿಸಿಕೊಳ್ಳಿ..

Webdunia
ಮಂಗಳವಾರ, 19 ಜೂನ್ 2018 (14:20 IST)
ಕಣ್ಣಿನ ಸುತ್ತಲಿನ ಕಪ್ಪು ವರ್ತುಲ, ಉರಿಯೂತ, ಕಣ್ಣುರಿ, ಕಣ್ಣು ಕೆಂಪಗಾಗುವುದು, ಕಣ್ಣಿನ ಗುಳಿಬೀಳುವಿಕೆ ಹೀಗೆ ಹಲವು ಸಮಸ್ಯೆಗಳು ನಮ್ಮ ಕಣ್ಣುಗಳ ಸೌಂದರ್ಯವನ್ನು ಹಾಳುಮಾಡುತ್ತವೆ. ಪ್ರತಿಯೊಬ್ಬರೂ ಸುಂದರವಾದ ಮತ್ತು ಆರೋಗ್ಯವಾದ ಕಣ್ಣುಗಳನ್ನು ಹೊಂದಲು ಇಷ್ಟಪಡುತ್ತಾರೆ. ಆದ್ದರಿಂದ ಈ ಕೆಳಗಿನ ಟಿಪ್ಸ್ ಪಾಲಿಸಿ ಸುಂದರವಾದ ಕಣ್ಣುಗಳನ್ನು ನಿಮ್ಮದಾಗಿಸಿಕೊಳ್ಳಿ.
*ಟೀ ಬ್ಯಾಗ್‌ಗಳನ್ನು ಬಳಸಿ - ತಂಪಾದ ಟೀ ಬ್ಯಾಗ್‌ಗಳನ್ನು ಮುಚ್ಚಿದ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಗಿಡಮೂಲಿಕೆಗಳಿರುವ ಟೀ ಬ್ಯಾಗ್ ಉಪಯೋಗಿಸಬೇಡಿ, ಏಕೆಂದರೆ ಕಪ್ಪು ಟೀ ಬ್ಯಾಗ್‌ನಂತೆ ಎಲ್ಲವೂ ಪರಿಣಾಮಕಾರಿಯಲ್ಲ. ಇದು ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ.
 
*ಒದ್ದೆ ಹತ್ತಿ ಉಂಡೆಗಳನ್ನು ಬಳಸಿ - ತಂಪಾದ ನೀರಿನಲ್ಲಿ ಹತ್ತಿ ಉಂಡೆಗಳನ್ನು ಅದ್ದಿ ಅದನ್ನು ಮುಚ್ಚಿದ ಕಣ್ಣುಗಳ ಮೇಲೆ 10-15 ನಿಮಿಷ ಇರಿಸಿಕೊಳ್ಳಿ. ಇದು ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ.
 
*ಸೌತೆಕಾಯಿಯ ತುಂಡುಗಳು - ದಣಿದ ಕಣ್ಣುಗಳಿಗೆ ಸೌತೆಕಾಯಿಗಳು ಉತ್ತಮವಾಗಿದೆ. ಅದರ ಎರಡು ತುಂಡುಗಳನ್ನು ಕಣ್ಣುಗಳ ಮೇಲೆ ಇರಿಸಿಕೊಂಡು ಸ್ವಲ್ಪ ಸಮಯ ವಿರಾಮಿಸಬೇಕು. ಅದರಿಂದ ಕಣ್ಣುಗಳು ತಂಪಾಗಿಸುವುದರೊಂದಿಗೆ ಕಪ್ಪು ವರ್ತುಲವನ್ನೂ ಸಹ ತಿಳಿಯಾಗಿಸುತ್ತದೆ. ನೀವು ಸೌತೆಕಾಯಿಯ ರಸವನ್ನು ತೆಗೆದು ಅದರಲ್ಲಿ ಕಾಟನ್ ಬಾಲ್ ಅದ್ದಿ ಅದನ್ನು ಕಣ್ಣಿನ ಮೇಲಿಟ್ಟು ವಿರಮಿಸಲೂಬಹುದು.
 
*ಟೊಮೆಟೋ, ನಿಂಬೆ ರಸ, ಅರಿಶಿಣ - 1 ಚಮಚ ಟೊಮೆಟೋ ರಸ, ಚಿಟಿಕೆ ಅರಿಶಿಣ ಮತ್ತು 1/2 ಚಮಚ ನಿಂಬೆ ರಸವನ್ನು ಬೆರೆಸಿ. ಆ ಮಿಶ್ರಣವನ್ನು ಕಣ್ಣಿನ ರೆಪ್ಪೆಗಳ ಮೇಲೆ ಮತ್ತು ಕಪ್ಪು ವರ್ತಲದ ಸುತ್ತ ಹಚ್ಚಿಕೊಳ್ಳಿ. ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಇದು ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ.
 
*ಸುಂದರವಾದ ಕಣ್ಣುಗಳಿಗಾಗಿ ಬಾದಾಮಿ ಎಣ್ಣೆ ಮತ್ತು ನಿಂಬೆ ರಸ - ಒಂದು ಚಮಚ ಬಾದಾಮಿ ಎಣ್ಣೆ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿ ಅದನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಒಂದು ರಾತ್ರಿ ಅದನ್ನು ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ. ಇದು ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ.
 
*ರೋಸ್ ವಾಟರ್ - ಕಣ್ಣಿನ ಸುತ್ತಲಿನ ಕಪ್ಪು ವರ್ತುಲವನ್ನು ಹೋಗಲಾಡಿಸಲು ರೋಸ್ ವಾಟರ್ ಉತ್ತಮ ಔಷಧವಾಗಿದೆ. ಹತ್ತಿಯ ಉಂಡೆಗಳನ್ನು ರೋಸ್ ವಾಟರ್‌ನಲ್ಲಿ ಅದ್ದಿ ಅದನ್ನು ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿ 10-15 ನಿಮಿಷಗಳು ಇರಿಸಿಕೊಳ್ಳಿ. ಕಪ್ಪು ವರ್ತುಲವನ್ನು ಹೋಗಲಾಡಿಸಲು ದಿನವೂ ಇದನ್ನು ಮಾಡಿ.
 
*ಆಲೂಗಡ್ಡೆಯ ರಸ - ಆಲೂಗಡ್ಡೆಯ ತುಂಡುಗಳನ್ನು 10-15 ನಿಮಿಷಗಳು ನಿಮ್ಮ ಕಣ್ಣುಗಳ ಮೇಲೆ ಇರಿಸಿಕೊಳ್ಳಿ ಅಥವಾ ಹಸಿ ಆಲೂಗಡ್ಡೆಯ ರಸವನ್ನು ನಿಮ್ಮ ಕಣ್ಣುಗಳ ಸುತ್ತ ಹಚ್ಚಿಕೊಳ್ಳಿ. ಸ್ವಲ್ಪ ದಿನಗಳಲ್ಲಿ ಬದಲಾವಣೆ ನಿಮಗೆ ಕಾಣಿಸುತ್ತದೆ. ಕಣ್ಣುಗಳ ಗುಳಿಬೀಳುವಿಕೆಯು ಕಡಿಮೆಯಾಗುತ್ತದೆ.
 
*ಬಾದಾಮಿ ಎಣ್ಣೆ ಮತ್ತು ಜೇನು - 1 ಚಮಚ ಬಾದಾಮಿ ಎಣ್ಣೆ ಮತ್ತು 1/2 ಚಮಚ ಜೇನನ್ನು ಬೆರೆಸಿ ಅದನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಇದು ಕಣ್ಣುಗಳ ಗುಳಿಬೀಳುವಿಕೆಯನ್ನು ತಡೆಯುತ್ತದೆ.
 
ಈ ಉಪಯುಕ್ತ ಸಲಹೆಗಳನ್ನು ಅನುಸರಿಸಿ ಸುಂದರವಾದ, ಕಪ್ಪುವರ್ತುಲ ರಹಿತ ನಯನಗಳನ್ನು ನಿಮ್ಮದಾಗಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments