Select Your Language

Notifications

webdunia
webdunia
webdunia
webdunia

ಈ ಗಿಡಗಳು ಮನೆಯಲ್ಲಿದ್ದರೆ ಸೊಳ್ಳೆಗಳು ಪರಾರಿಯಾಗುತ್ತವೆಯಂತೆ!

ಈ ಗಿಡಗಳು ಮನೆಯಲ್ಲಿದ್ದರೆ ಸೊಳ್ಳೆಗಳು ಪರಾರಿಯಾಗುತ್ತವೆಯಂತೆ!
ಬೆಂಗಳೂರು , ಸೋಮವಾರ, 26 ಮಾರ್ಚ್ 2018 (06:37 IST)
ಬೆಂಗಳೂರು : ಇತ್ತಿಚೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು,. ಎಲ್ಲೆಂದರಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತವೆ. ಇವುಗಳಿಂದ ನಾವು ಡೆಂಗ್ಯೂ, ಟೈಫಾಯಿಡ್, ಮಲೇರಿಯಾದಂತಹ ವಿಷಮ ಜ್ವರಗಳಿಂದ ನರಳಬೇಕಾಗುತ್ತದೆ. ಆದರೆ ಈ ಅನಾರೋಗ್ಯಕ್ಕೆ ತುತ್ತಾಗಬಾರದು ಎಂಬ ಉದ್ದೇಶದಿಂದಲೇ ಬಳಷ್ಟು ಮಂದಿ ಮಸ್ಕಿಟೋ ರಿಪೆಲ್ಲೆಂಟ್‌ಗಳನ್ನು ,ಸೊಳ್ಳೆ ಪರದೆಗಳನ್ನು  ಬಳಸುತ್ತಾರೆ. ಆದರೆ ಈ ಕೆಳಗಿನ ಗಿಡಗಳನ್ನು ಮನೆಯಲ್ಲಿ ಬೆಳೆಸಿಕೊಂಡರೆ ಸೊಳ್ಳೆಗಳನ್ನು ಓಡಿಸಬಹುದು. ಯಾಕೆಂದರೆ ಈ ಗಿಡಗಳಿಗೆ ಬಿಡುವ ಹೂಗಳು ನಿಮ್ಮ ಮನೆಯೊಳಕ್ಕೆ ಸೊಳ್ಳೆಗಳು ಬರದಂತೆ ತಡೆಯುತ್ತವೆ. ಸೊಳ್ಳೆಗಳನ್ನು ನಿವಾರಿಸುತ್ತವೆ.


ತುಳಸಿ : ಇದು ಅನಾರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ಸೊಳ್ಳೆಗಳನ್ನು ಓಡಿಸುವ ಶಕ್ತಿ ಸಹ ತುಳಸಿಗೆ ಇದೆ. ಇವುಗಳ ಹೂವುಗಳು ಸೊಳ್ಳೆಗಳನ್ನು ದೂರ ಓಡಿಸುತ್ತವೆ. ಆದಕಾರಣ ತುಳಸಿ ಗಿಡಗಳನ್ನು ಬೆಳೆಸಿಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು.

ಲವಂಗ ಗಿಡ: ಲವಂಗ ಗಿಡದ ಎಲೆಗಳಿಂದ ಬರುವ ವಾಸನೆ ಅಷ್ಟೇ ಅಲ್ಲ, ಈ ಗಿಡದ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ. ಆದಕಾರಣ ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಉಪಯುಕ್ತ. ಆದರೆ ಲವಂಗ ಎಣ್ಣೆಯನ್ನು ನಿದ್ರಿಸುವ ಮುನ್ನ ಚರ್ಮಕ್ಕೆ ಹಚ್ಚಿಕೊಂಡರೆ ಆ ವಾಸನೆಗೂ ಸೊಳ್ಳೆಗಳು ಹತ್ತಿರ ಸುಳಿಯಲ್ಲ.

ಚಂಡು ಹೂವು
ಚೆಂಡು ಹೂವಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು. ಚೆಂಡು ಹೂಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚದಂತೆ ಇರುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಸ್ ಮಾಡುವುದರಿಂದ ಎಚ್ ಐವಿ ಹರಡುತ್ತಾ?!