ಮಕ್ಕಳಿಗೆ ವಾಂತಿಯಾಗುತ್ತಿದ್ದರೆ ಔಷಧ ನೀಡುವ ಬದಲು ಒಮ್ಮೆ ಈ ಮನೆಮದ್ದನ್ನು ಬಳಸಿ ನೋಡಿ

ಗುರುವಾರ, 31 ಜನವರಿ 2019 (08:50 IST)
ಬೆಂಗಳೂರು : ಮಕ್ಕಳಿಗೆ ಅರ್ಜೀಣ ಸಮಸ್ಯೆಯಾದಾಗ, ಪಿತ್ತವಾದಾಗ, ಪುಡ್ ಪಾಯಿಸನ್ ಆದಾಗ ವಾಂತಿಯಾಗುತ್ತದೆ. ಈ ವಾಂತಿ ನಿಲ್ಲಲು ಔಷಧಗಳನ್ನು ಕುಡಿಸುವ ಬದಲು ಈ ಮನೆಮದ್ದುಗಳನ್ನು ಬಳಸಿ ನೋಡಿ. ಇದು 1-10 ವರ್ಷದೊಳಗನ ಎಲ್ಲಾ ಮಕ್ಕಳಿಗೂ ವಾಂತಿ ನಿಲ್ಲಿಸಲು ಉಪಯೋಗಕಾರಿಯಾಗಿದೆ.


ಶುಂಠಿ ರಸ 1 ಟೀ ಚಮಚ, ನಿಂಬೆ ರಸ 1 ಟೀ ಚಮಚ, ಜೇನುತುಪ್ಪ ಅಥವಾ ಹಳೆಬೆಲ್ಲ 1ಟೀ ಚಮಚ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮಕ್ಕಳಿಗೆ ತಿನ್ನಿಸಿ. ಇದನ್ನು ದಿನಕ್ಕೆ  3-4 ಬಾರಿ ಮಾಡಬೇಕು. ಒಂದೇ ದಿನದಲ್ಲಿ ಮಕ್ಕಳಿಗೆ ವಾಂತಿ ನಿಲ್ಲುತ್ತದೆ.
ಜೀರಿಗೆ ಪುಡಿ ½ ಟೀ ಚಮಚ, ಏಲಕ್ಕಿ ಪುಡಿ ½ ಟೀ ಚಮಚ ಎರಡನ್ನು 50 ನೀರಿಗೆ ಹಾಕಿ 5-10 ನಿಮಿಷ ಕುದಿಸಿ. ನಂತರ ಅದನ್ನು ಸೋಸಿ ಸ್ವಲ್ಪ ಉಗುರುಬೆಚ್ಚಗಾದ  ಮೇಲೆ ½ ಟೀ ಚಮಚದಷ್ಟು ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಸಿ. ಇದನ್ನು ಕೂಡ ದಿನಕ್ಕೆ  3-4 ಬಾರಿ ಮಾಡಬೇಕು.


ಈರುಳ್ಳಿ ರಸ 1 ಟೀ ಚಮಚ, ಶುಂಠಿ ರಸ 1 ಟೀ ಚಮಚ, ಜೇನುತುಪ್ಪ ½ ಟೀ ಚಮಚ ಮೂರನ್ನು ಚೆನ್ನಾಗ ಮಿಕ್ಸ್ ಮಾಡಿ ತಿನ್ನಿಸಿ. ಜೊತೆಗೆ ಈರುಳ್ಳಿ ಕಟ್ ಮಾಡಿ ಬಟ್ಟೆಯಲ್ಲಿ ಸುತ್ತಿಕೊಂಡು ಮಗುವಿಗೆ  ವಾಸನೆ ತೋರಿಸುವುದರಿಂದ ವಾಂತಿ ನಿಲ್ಲುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಳನೀರಿನೊಂದಿಗೆ ಇದನ್ನು ಮಿಶ್ರಣ ಮಾಡಿ ಕುಡಿಸಿ