Select Your Language

Notifications

webdunia
webdunia
webdunia
webdunia

ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಮಂಗಳವಾರ, 29 ಜನವರಿ 2019 (08:25 IST)
ಬೆಂಗಳೂರು : 10 ರಲ್ಲಿ 8 ಜನ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಇರುತ್ತದೆ. ಸರಿಯಾದ ಆಹಾರ ತಿನ್ನದಿರುವುದು, ಗರ್ಭಕೋಶದ ಸಮಸ್ಯೆ, ಒತ್ತಡ ಜೀವನಶೈಲಿ ಮುಂತಾದ ಕಾರಣಗಳಿಂದ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ.


ಪ್ರತಿದಿನ ಒಂದು ಹಿಡಿ ಜೀರಿಗೆ ತಿಂದು ನೀರು ಕುಡಿದರೆ 20-25 ದಿನದಲ್ಲಿ ಈ ಸಮಸ್ಯೆ ನಿವಾರಣೆಯಾಗಬೇಕು. ಹಾಗೇ ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ ನಂತರ ಅದಕ್ಕೆ 1 ಚಮಚ ಜೇನುತುಪ್ಪ ಹಾಕಿ ಈ ಕಷಾಯವನ್ನು ಪ್ರತಿದಿನ 2 ಬಾರಿ ಊಟವಾದ ಮೇಲೆ ಕುಡಿದರೆ 1 ತಿಂಗಳಲ್ಲೇ  ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.


ಬಿಸಿ ಹಾಲಿಗೆ ಬೆಲ್ಲ ಹಾಗೂ ¼ ಚಮಚ  ಅರಶಿನ ಹಾಕಿ ಕುಡಿದರೆ ಪ್ರತಿದಿನ 1 ಬಾರಿ ಬಾರಿ ಊಟವಾದ ಮೇಲೆ ಕುಡಿದರೆ 1 ತಿಂಗಳಲ್ಲೇ  ಈ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೇ ಬಿಸಿ ಹಾಲಿಗೆ ½ ಚಮಚ  ದಾಲ್ಚಿನಿ ಪುಡಿ ಹಾಕಿ ಊಟವಾದ ಮೇಲೆ ಕುಡಿದರೆ 1-1 ½ ತಿಂಗಳಲ್ಲೇ  ನಿಮ್ಮ ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಲಿವರ್ ಶುದ್ಧವಾಗಿರಬೇಕೆಂದರೆ ಇದನ್ನು ತಿನ್ನಿ