Publish Date: Thu, 03 Oct 2019 (13:56 IST)
Updated Date: Thu, 03 Oct 2019 (13:58 IST)
ಪ್ರಶ್ನೆ: ಮದುವೆಯಾಗಿ ನಾಲ್ಕು ವರ್ಷಗಳು ಆಗುತ್ತಾ ಬಂದಿವೆ. ನಾನು ಈಗ 29 ವರ್ಷದ ಯುವತಿ. ನಮ್ಮ ಮೊದಲ ರಾತ್ರಿಯಂದು ನನ್ನ ಗಂಡ ನನ್ನ ಸೇರಬೇಕೆನ್ನುವಷ್ಟರಲ್ಲಿ ಅವರಿಗೆ ಸ್ಖಲಿಸಿತ್ತು. ಆ ಮೇಲೆ ಕೂಡ ಅವರಿಗೆ ತುಂಬಾ ಹೊತ್ತು ಸರಸ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಖಲಿಸಿದ ನಂತರ ದೊಪ್ಪನೆ ಮಲಗ್ತಾರೆ.
ನಾನು ಪ್ರತಿದಿನವೂ ಮತ್ತೊಮ್ಮೆ ಸಂಭೋಗ ಮಾಡುವಂತೆ ಪೀಡಿಸಿದರೂ ಅವರಿಂದ ಅದು ಸಾಧ್ಯವಾಗುತ್ತಿಲ್ಲ. ನಾನು ಕೇವಲ ಒಂದು ಬಾರಿ ಮಾತ್ರ ಗಂಡನೊಂದಿಗೆ ಸೇರುತ್ತಿದ್ದೇನೆ. ನನಗೆ ಸುಖ ಸಿಗುತ್ತಿಲ್ಲ. ಮಕ್ಕಳೂ ಆಗುತ್ತಿಲ್ಲ ಏನು ಮಾಡಲಿ? ಪರಿಹಾರ ಸೂಚಿಸಿ.
ಸಲಹೆ:29 ವರ್ಷದ ಯುವತಿ ನೀವಾಗಿದ್ದರೆ ನಿಮ್ಮ ಗಂಡನಿಗೆ 32 ವರ್ಷ ಇರಬೇಕು ಎಂದು ಭಾವಿಸುವೆ. ನಿಮ್ಮ ಗಂಡ ಸಂಭೋಗ ವಿಷಯದಲ್ಲಿ ಹೆದರಿದ್ದಾರೆಂದು ಅನಿಸುತ್ತದೆ. ನಿಮ್ಮ ಮೊದಲ ಮಿಲನದ ಸಮಯದಂದು ನಿಮ್ಮ ಗಂಡ ನಿಮ್ಮನ್ನು ಸೇರುವ ಮುನ್ನವೇ ಸ್ಖಲಿಸಿದ್ದಾರೆಂದರೆ ಅವರಿಗೆ ಶೀಘ್ರಸ್ಖಲನ ದೋಷವಿದೆ ಎಂದು ಹೇಳಲಾಗದು. ನಿಮ್ಮಿಬ್ಬರಿಗೂ ಅದು ಮೊದಲ ಅನುಭವವಾಗಿರುವುದರಿಂದ ಆತಂಕದಿಂದ ಶೀಘ್ರಸ್ಖಲನವಾಗಿದೆಯಷ್ಟೆ.
ಪುರುಷನಿಗೆ ಒಮ್ಮೆ ಸ್ಖಲಿಸಿದ ನಂತರ ಅದೇ ಸಮಯದಲ್ಲಿ ಮತ್ತೊಮ್ಮೆ ಸಂಭೋಗ ನಡೆಸಲು ಸಾಧ್ಯವಿಲ್ಲ. ಆತ ಮತ್ತೊಮ್ಮೆ ಸಂಭೋಗ ಮಾಡಬೇಕಾದರೆ ಒಂದರಿಂದ ಎರಡು ಗಂಟೆಯವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಸ್ಖಲಿಸಿದ ತಕ್ಷಣ ಮತ್ತೊಮ್ಮ ಅದನ್ನು ನಡೆಸವುಂತೆ ಒತ್ತಾಯಿಸುವುದು ಸರಿಯಲ್ಲ.
ಸಾವಕಾಶದಿಂದ, ಯಾವುದೇ ಆತಂಕವಿಲ್ಲದೆ ಸರಸ ಮಾಡಿದರೆ ಅಥವಾ ಪುರುಷ ಸ್ಖಲಿಸುವ ಸಂದರ್ಭ ಸಂಭೋಗ ಹೊರತಾದ ಯೋಚನೆ ಮಾಡುವ ಮೂಲಕ ಸ್ಖಲನದಿಂದ ತಪ್ಪಿಸಬಹುದು.