Publish Date: Tue, 01 Oct 2019 (13:44 IST)
Updated Date: Tue, 01 Oct 2019 (13:45 IST)
ಪ್ರಶ್ನೆ: ಸರ್, ನಾನು 30 ವರ್ಷದ ಗೃಹಿಣಿ. ಮದುವೆಯಾಗಿ ಒಂದು ಗಂಡು ಮಗುವಿದೆ. ಮದುವೆಯಾದ ಮೇಲೆ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೆ. ಅವನ ಜೊತೆ ಓಡಿಹೋಗಿದ್ದೆ. ಆದರೆ ಆತ ನನ್ನನ್ನು ಸಂಪೂರ್ಣವಾಗಿ ಅನುಭವಿಸಿದ ಮೇಲೆ ಕೈ ಕೊಟ್ಟ. ಹೀಗಾಗಿ ಅನಿವಾರ್ಯವಾಗಿ ಗಂಡನ ಮನೆಗೆ ಬಂದೆ.
ಆದರೆ ಗಂಡ ನನ್ನನ್ನು ದೂರ ಮಾಡುತ್ತಿದ್ದಾನೆ. ಈ ನಡುವೆ ಗಂಡನ ಸ್ನೇಹಿತ ನನಗೆ ಹತ್ತಿರವಾಗಿದ್ದಾನೆ. ನನಗೆ ತಿಳಿಯದೇ ಗಂಡನ ಸ್ನೇಹಿತನ ಜತೆ ಮಲಗಿ ಸುಖಿಸುತ್ತಿರುವೆ. ಮುಂದೇನು ಅನ್ನೋ ಚಿಂತೆ ಕಾಡುತ್ತಿದೆ.
ಉತ್ತರ: ನೀವು ಮದುವೆಯಾದ ಮೇಲೆ ಗಂಡನಿಗೆ ನಿಯತ್ತಾಗಿರಬೇಕಿತ್ತು. ಆದರೆ ಹಾಗೆ ಮಾಡದೇ ಪ್ರೀತಿಸಿದವನೊಂದಿಗೆ ಓಡಿ ಹೋಗಿ ತಪ್ಪು ಮಾಡಿದ್ದೀರಿ. ಮರಳಿ ಬಂದ ಮೇಲೆ ನಿಮ್ಮ ಗಂಡ ನಿಮ್ಮ ಮೇಲಿನ ಪ್ರೀತಿ ಕಡಿಮೆ ಮಾಡಿಕೊಂಡಿರಬಹುದು.
ಆದರೆ ಬುದ್ದಿ ಕಲಿಯದ ನೀವು ಮತ್ತೆ ಗಂಡನ ಸ್ನೇಹಿತನ ತೆಕ್ಕೆ ಜಾರೋ ಮೂಲಕ ಗಂಡನಿಗೆ ದ್ರೋಹದ ಮೇಲೆ ದ್ರೋಹ, ಮೋಸದ ಮೇಲೆ ಮೋಸ ಮಾಡುತ್ತಿರುವಿರಿ. ಅನೈತಿಕ ಸಂಬಂಧ ಬಿಟ್ಟು ಹೊರಬನ್ನಿ. ಗಂಡನಿಗೆ ನಡೆದ ವಿಷಯ ತಿಳಿಸಿ.