Publish Date: Tue, 11 Jun 2019 (09:15 IST)
Updated Date: Tue, 11 Jun 2019 (09:17 IST)
ಬೆಂಗಳೂರು: ಕೆಲವೊಮ್ಮೆ ವೃತ್ತಿ ಜೀವನದ ಅನಿವಾರ್ಯತೆಯಿಂದ ಗಂಡ ಮತ್ತು ಹೆಂಡತಿ ಬೇರೊಂದು ಊರಿನಲ್ಲಿ ನೆಲೆಸುವ ಅನಿವಾರ್ಯತೆಯಿರುತ್ತದೆ.
ಅದರಲ್ಲೂ ವಿದೇಶದಲ್ಲಿರುವ ಗಂಡ ಅಪರೂಪಕ್ಕೆ ಊರಿಗೆ ಬಂದಾಗ ಪತ್ನಿ ಜತೆ ಕಾಮದಾಸೆ ತೀರಿಸಿಕೊಳ್ಳುವ ಆತುರದಲ್ಲಿ ಕೆಲವೊಮ್ಮೆ ಆಕೆಗೆ ನೋವಾಗುವಂತೆ ನಡೆದುಕೊಳ್ಳುವ ಎಷ್ಟೋ ಪ್ರಕರಣಗಳಿವೆ.
ಇಂತಹ ಸಂದರ್ಭದಲ್ಲಿ ಒಂದೋ ಗಂಡ-ಹೆಂಡತಿ ಜತೆಯಾಗಿ ಕುಳಿತು ಸಮಾಲೋಚಿಸಿ ಜತೆಯಾಗಿ ಬದುಕಲು ತೀರ್ಮಾನಿಸಬೇಕು. ಇಲ್ಲವೇ ಪತಿ ತನ್ನ ಕಾಮದಾಹವನ್ನು ನಿಯಂತ್ರಿಸಲು ಯೋಗ, ಧ್ಯಾನದಂತಹ ಮನೋನಿಗ್ರಹ ಮಾಡಿಕೊಳ್ಳುವ ಕೆಲಸವನ್ನು ಮೈಗೂಡಿಸಿಕೊಳ್ಳಬೇಕು. ಅಪರೂಪಕ್ಕೆ ಬರುವ ಪತಿಯ ಬಗ್ಗೆ ಪತ್ನಿಗೂ ಹಲವು ನಿರೀಕ್ಷೆಗಳಿರುತ್ತವೆ ಎಂಬುದ್ನು ಮರೆಯಬಾರದು!