Select Your Language

Notifications

webdunia
webdunia
webdunia
webdunia

ಗಾಯಗಳಾದರೆ ಈ ಮನೆ ಮದ್ದು ಮಾಡಿ

ಗಾಯಗಳಾದರೆ ಈ ಮನೆ ಮದ್ದು ಮಾಡಿ
ಬೆಂಗಳೂರು , ಗುರುವಾರ, 1 ಮಾರ್ಚ್ 2018 (08:51 IST)
ಬೆಂಗಳೂರು: ಸಣ್ಣ ಪುಟ್ಟ ಗಾಯಗಳಿಗೆ ನಮ್ಮ ಮನೆಯಲ್ಲೇ ಮದ್ದು ಇದೆ. ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳಿಂದ ಗಾಯಕ್ಕೆ ಮದ್ದು ಮಾಡಬಹುದು.

ಅರಸಿನ
ಸುಟ್ಟ ಗಾಯಗಳಾಗಿದ್ದಲ್ಲಿ, ನಂಜು ಆಗಿ ಕೀವಾಗದಂತೆ ತಡೆಯಲು ಅರಸಿನ ಬೆಸ್ಟ್ ಮದ್ದು. ಅರಸಿನ ಪುಡಿಯನ್ನು ಕೊಂಚ ಬಿಸಿ ಮಾಡಿಕೊಂಡು ಗಾಯವಾದ ಜಾಗಕ್ಕೆ ಹಚ್ಚಿಕೊಂಡರೆ ಸಾಕು.

ಬೆಳ್ಳುಳ್ಳಿ
ಬೆಳ್ಳುಳ್ಳಿ ಗಾಯದ ರಕ್ತಸ್ರಾವ, ನೋವು ತಡೆಯುವ ಗುಣ ಹೊಂದಿದೆ. ಇಂತಹ ಗಾಯಗಳಿಗೆ ಬೆಳ್ಳುಳ್ಳಿ ರಸ ಹಚ್ಚಿಕೊಳ್ಳಬಹುದು. ಅಥವಾ ಎಣ್ಣೆ ಮಾಡಿ ಹಚ್ಚಿಕೊಳ್ಳಬಹುದು.

ಜೇನು ತುಪ್ಪ
ಜೇನು ತುಪ್ಪದಲ್ಲಿ ಸೋಂಕು ತಡೆಯುವ ಗುಣ ಹೊಂದಿದೆ. ಇದು ಗಾಯ ಒಣಗುವಂತೆ ಮಾಡುವುದಲ್ಲದೆ, ಕೀವಾಗದಂತೆ ತಡೆಯುವುದು.

ಅಲ್ಯುವೀರಾ
ಅಲ್ಯುವೀರಾದಲ್ಲಿ ಊದಿಕೊಳ್ಳದಂತೆ, ಕೀವಾಗದಂತೆ ತಡೆಯುವ ನಿರೋಧಕ ಶಕ್ತಿಯಿದೆ. ಅಷ್ಟೇ ಅಲ್ಲದೆ, ಗಾಯ ಉರಿಯುತ್ತಿದ್ದರೆ ತಂಪಾಗಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿ ದಿನ ಸೆಕ್ಸ್ ಮಾಡಿದರೆ ಆಗುವ ಅಪಾಯವೇನು ಗೊತ್ತಾ?