Webdunia - Bharat's app for daily news and videos

Install App

ಕೆಮ್ಮು, ಕಫ, ನೆಗಡಿ, ಜ್ವರಗಳಿಗೆ ಮನೆ ಮದ್ದುಗಳು....

ನಾಗಶ್ರೀ ಭಟ್
ಶುಕ್ರವಾರ, 15 ಡಿಸೆಂಬರ್ 2017 (15:13 IST)
ನೆಗಡಿ, ಕಫ, ಕೆಮ್ಮು, ಜ್ವರ ಇವುಗಳು ಸಾಮಾನ್ಯವಾದ ಕಾಯಿಲೆಗಳು. ಇವಕ್ಕೆಲ್ಲಾ ತಕ್ಷಣವೇ ಆಸ್ಪತ್ರಗೆ ಹೋಗಿ ಸಮಯ ಮತ್ತು ಹಣವನ್ನು ಪೋಲು ಮಾಡುವ ಬದಲು ಮನೆಯಲ್ಲಿ ನಾವೇ ಹಲವಾರು ಔಷಧಗಳನ್ನು ಮಾಡಿಕೊಳ್ಳಬಹುದು. 

ಇದಕ್ಕಾಗಿ ನೀವು ವಸ್ತುಗಳನ್ನು ಹೊರಗೆಲ್ಲೂ ಹುಡುಕಾಡುವ ಅಗತ್ಯವೇ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿಯೇ ನಿಮ್ಮ ಕಾಯಿಲೆಗಳಿಗೆ ಔಷಧಗಳು ದೊರಕುತ್ತವೆ. ನಮಗೇ ತಿಳಿಯದೇ ನಾವು ದಿನನಿತ್ಯವೂ ಅಡುಗೆಯಲ್ಲಿ ಇವುಗಳನ್ನು ಬಳಸುತ್ತಿರುತ್ತೇವೆ. ಯಾವೆಲ್ಲಾ ವಸ್ತುಗಳು ಈ ಮೇಲಿನ ಕಾಯಿಲೆಗಳನ್ನು ಗುಣಪಡಿಸುತ್ತದೆ ನೋಡೋಣ..
 
* ಲಿಂಬು, ಸಕ್ಕರೆ(ಕಲ್ಲುಸಕ್ಕರೆ) ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಟ್ಟುಕೊಂಡು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫವನ್ನು ಕಡಿಮೆಯಾಗಿಸುತ್ತದೆ ಮತ್ತು ಕೆಮ್ಮಿನ ಸಮಸ್ಯೆಯನ್ನೂ ನಿವಾರಿಸುತ್ತದೆ.
 
* ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಿಕೊಂಡು ಬಿಸಿ ಬಿಸಿಯಾಗಿ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.
 
* ಒಂದು ಬೌಲ್‌ನಲ್ಲಿ ಕುದಿಯುವ ನೀರನ್ನು ತೆಗೆದುಕೊಂಡು ಅದಕ್ಕೆ ಚಿಟಿಕೆ ವಿಕ್ಸ ಅನ್ನು ಸೇರಿಸಿ ಶಾಖ ತೆಗೆದುಕೊಳ್ಳುವುದರಿಂದ ಕಟ್ಟಿದ ಮೂಗಿನಿಂದ ಮುಕ್ತಿ ದೊರೆಯುತ್ತದೆ.
 
* ಶುಂಠಿಯ ಚಹಾವನ್ನು ಮಾಡಿ ಕುಡಿದರೆ ನೆಗಡಿ ಮತ್ತು ಕಫವನ್ನು ನಿವಾರಿಸುತ್ತದೆ.
 
* ದಾಲ್ಚಿನಿ, ಜೇನು ಮತ್ತು ನಿಂಬೆರಸವನ್ನು ಸೇರಿಸಿ ಸೇವಿಸಿದರೆ ನೆಗಡಿ ಮತ್ತು ಕಫದ ನಿವಾರಣೆಯಾಗುತ್ತದೆ.
 
* ನೆಗಡಿ ಅಥವಾ ಜ್ವರವಿರುವಾಗ ಬೆಚ್ಚಗಿನ ನೀರನ್ನು ಕುಡಿದರೆ ಅದು ಗಂಟಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
 
* ಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವಿನ ನಿವಾರಣೆಯಾಗುತ್ತದೆ.
 
* ನಿಯಮಿತವಾಗಿ ನೆಲ್ಲಿಕಾಯಿಯನ್ನು ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫಗಳಿಂದ ದೂರವಿರಬಹುದು.
 
* ಶುಂಠಿ, ಲವಂಗ ಮತ್ತು ಉಪ್ಪನ್ನು ಸೇರಿಸಿಕೊಂಡು ಅಗಿದರೆ ಕಫ ಮತ್ತು ಗಂಟಲ ಕೆರೆತದ ನಿವಾರಣೆಯಾಗುತ್ತದೆ.
 
* ಕಹಿಬೇವಿನ ಕಷಾಯವನ್ನು ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
 
* ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಒಣ ಕೆಮ್ಮು ವಾಸಿಯಾಗುತ್ತದೆ.
 
* ಕಲ್ಲು ಸಕ್ಕರೆ ಮತ್ತು ಲವಂಗವನ್ನು ಕೆಮ್ಮು ಬರುತ್ತಿರುವ ಸಂರ್ಭದಲ್ಲಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
 
* ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿದರೆ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ. ಅರಿಶಿಣ ಆ್ಯಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ.
 
* 4-5 ದೊಡ್ಡಪತ್ರೆ ಎಲೆಗಳನ್ನು ಬಿಸಿ ಮಾಡಿ ಅದರ ರಸಕ್ಕೆ 2 ಚಮಚ ಜೇನನ್ನು ಸೇರಿಸಿ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುತ್ತದೆ.
 
* ಅಮೃತ ಬಳ್ಳಿಯ ಕಷಾಯ ಮಾಡಿ ಕುಡಿದರೆ ಜ್ವರವನ್ನು ವಾಸಿಮಾಡುತ್ತದೆ. ಅಮೃತ ಬಳ್ಳಿಗೆ ಹಿಂದಿಯಲ್ಲಿ ಗಿಲೋಯ್ ಎಂದೂ ಸಂಸ್ಕೃತದಲ್ಲಿ ಗುಡುಚಿ ಎಂದೂ ಕರೆಯುತ್ತಾರೆ. ಇದು ಹಲವಾರು ರೋಗಗಳನ್ನು ವಾಸಿಮಾಡುವ ಔಷಧೀಯ ಗುಣವನ್ನು ಹೊಂದಿರುವುದರಿಂದ ಕನ್ನಡದಲ್ಲಿ ಅಮೃತ ಬಳ್ಳಿ ಎಂದು ಕರೆಯುತ್ತಾರೆ. 
 
* ಕಿರಾತನ ಕಡ್ಡಿಯ(ನೆಲ ಬೇವು) ಕಷಾಯವನ್ನು ಮಾಡಿ ಕುಡಿದರೆ ಒಳ ಜ್ವರದ ನಿವಾರಣೆಯಾಗುತ್ತದೆ. ಕಿರಾತನ ಕಡ್ಡಿಯನ್ನು 'ಕಿಂಗ್ ಆಫ್ ಬಿಟರ್' ಎಂದೇ ಕರೆಯುತ್ತಾರೆ.
 
* ಒಂದು ಲೋಟ ನೀರಿಗೆ 1 ಚಮಚ ಮೆಂತೆ, 1 ಚಮಚ ದನಿಯಾ, 1/2 ಚಮಚ ಜೀರಿಗೆ, 5-6 ಬಿಳಿ ದಾಸವಾಳದ ಸೊಪ್ಪನ್ನು ಮತ್ತು ಬೆಲ್ಲವನ್ನು ಸೇರಿಸಿ ಕುದಿಸಿ ಕಷಾಯವನ್ನು ಮಾಡಿಕೊಂಡು ಅಗತ್ಯವಿದ್ದರೆ ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸಿಕೊಂಡು ಕುಡಿದರೆ ಜ್ವರ ಮತ್ತು ನೆಗಡಿ ವಾಸಿಯಾಗುತ್ತದೆ.
 
* 1 ಚಮಚ ಜೇನಿಗೆ 1/4 ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿಕೊಂಡು ತಿಂದರೆ ಕಫ ಕಡಿಮೆಯಾಗುತ್ತದೆ.
 
ಈ ಮೇಲೆ ನಾವು ಹೇಳಿರುವ ಔಷಧಗಳಲ್ಲಿ ಬಳಸಿರುವ ವಸ್ತುಗಳಲ್ಲಿ ಒಂದೆರಡನ್ನು ಹೊರತುಪಡಿಸಿದರೆ ಮಿಕ್ಕವೆಲ್ಲಾ ನಮ್ಮ ಮನೆಯಲ್ಲಿ ಸುಲಭವಾಗಿ ಕೈಗೆಟಕುವ ವಸ್ತುಗಳೇ. ಹಾಗಾಗಿ ನೀವೂ ಸಹ ಈ ಔಷಧಗಳನ್ನು ಪ್ರಯತ್ನಿಸಿ ನೋಡಬಹುದಲ್ಲಾ....!!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ
Show comments