Select Your Language

Notifications

webdunia
webdunia
webdunia
webdunia

ಕೂದಲನ್ನು ಮಾಯಿಶ್ಚರೈಸ್ ಮಾಡಲು ಇಲ್ಲಿದೆ ಟಿಪ್ಸ್

ಕೂದಲನ್ನು ಮಾಯಿಶ್ಚರೈಸ್ ಮಾಡಲು ಇಲ್ಲಿದೆ ಟಿಪ್ಸ್
ಬೆಂಗಳೂರು , ಮಂಗಳವಾರ, 19 ಅಕ್ಟೋಬರ್ 2021 (07:48 IST)
ನಮ್ಮ ಕೂದಲನ್ನು ತೇವಯುತಗೊಳಿಸಲು ಇರುವ ಪ್ರಾಥಮಿಕ ವಿಧಾನ ಅಂದ್ರೆ, ಎಣ್ಣೆ ಹಚ್ಚುವುದು. ಆದರೆ, ಕೆಲವು ಎಣ್ಣೆಗಳು ನೆತ್ತಿಯ ರಂಧ್ರಗಳನ್ನು ನಿರ್ಬಂಧಿಸಿ, ಪರೋಕ್ಷವಾಗಿ ಕೂದಲು ಉದುರುವಿಕೆ, ತಲೆಹೊಟ್ಟು ಮೊದಲಾದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಜೊತೆಗೆ ಆ ಎಣ್ಣೆಯನ್ನು ತೆಗೆಯಲು, ಶಾಂಪೂ ಬಳಸಲೇಬೇಕು. ಈ ರಾಸಾಯನಿಕಯುಕ್ತ ಶಾಂಪೂ ಕೂದಲಿನ ಶುಷ್ಕತೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನವರು ಎಣ್ಣೆ ಹಚ್ಚಲು ಹಿಂಜರಿಯುವುದು.
ಆದ್ದರಿಂದ ನೀವೇನಾದರೂ ಎಣ್ಣೆ ಬಳಸದೇ, ನಿಮ್ಮ ಕೂದಲನ್ನು ತೇವಗೊಳಿಸಬೇಕೆಂದು ಬಯಸಿದರೆ, ಈ ಕೆಳಗಿನ ಸರಳ ಉಪಾಯಗಳನ್ನು ಪ್ರಯತ್ನಿಸಬಹುದು.
1. ಜೇನುತುಪ್ಪ
webdunia

ಇದು ಕೂದಲಿಗೆ ಹೊಳಪನ್ನು ಸೇರಿಸುವುದಲ್ಲೇ, ಮೃದುವಾಗಿಸುತ್ತದೆ. ನಿಮ್ಮ ಕೂದಲಿನ ಹೊಳಪನ್ನು ಉಳಿಸಿಕೊಳ್ಳಲು ಬಯಸಿದರೆ, ಅದನ್ನು ಜೇನುತುಪ್ಪದೊಂದಿಗೆ ತೇವಗೊಳಿಸಿ. ಇದರಿಂದ ಒಣಕೂದಲಿನ ಸಮಸ್ಯೆ ದೂರವಾಗುವುದು.
2. ಮೊಸರು
webdunia


ಕೂದಲು ಉದುರುವುದನ್ನು ತಡೆಯಲು ಮೊಸರು ಅತ್ಯಂತ ನೈಸರ್ಗಿಕ ಪರಿಹಾರವಾಗಿದೆ. ಇದು ಒಣ ಕೂದಲನ್ನು ಪೋಷಿಸಿ, ನೆತ್ತಿಯನ್ನು ಹೈಡ್ರೇಟ್ ಆಗಿರಿಸುತ್ತದೆ. ಈ ನೈಸರ್ಗಿಕ ಹೇರ್ ಮಾಸ್ಕ್ ಪರಿಪೂರ್ಣ ತೈಲ ಬದಲಿಯಾಗಿದೆ.
3. ಮೊಟ್ಟೆ
webdunia

ಮೊಟ್ಟೆಗಳು ಅವು ವಿಟಮಿನ್, ಫೋಲೇಟ್, ಬಯೋಟಿನ್ ಮತ್ತು ಆರೋಗ್ಯಕರ ಕೂದಲಿಗೆ ಬೇಕಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ನೆತ್ತಿಯನ್ನು ಆಳವಾಗಿ ಪೋಷಿಸಿ, ಕೂದಲು ಒಡೆಯುವುದನ್ನು ಮತ್ತು ಉದುರುವುದನ್ನು ತಡೆಯುತ್ತದೆ. ಕೂದಲಿನ ಗುಣಮಟ್ಟವನ್ನು ಹೆಚ್ಚಿಸಲು ಮೊಟ್ಟೆಗಳನ್ನು ಶಿಫಾರಸು ಮಾಡಲಾಗುವುದು.
4. ಅವಕಾಡೊ
webdunia

ಈ ಅವಕಾಡೊಗಳ ಬಳಸಿ ಹೇರ್ ಮಾಸ್ಕ್ ತಯಾರಿಸಿ ಮತ್ತು ಮೃದುತ್ವವನ್ನು ಅನುಭವಿಸಿ. ಇದರ ಜೊತೆಗೆ, ಅವಕಾಡೊಗಳು ಕೂದಲು ಸೀಳಾಗುವ ಸಮಸ್ಯೆಗಳನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
5. ಬಾಳೆಹಣ್ಣು
webdunia

ನಿಮ್ಮ ಕೂದಲನ್ನು ಬಾಳೆಹಣ್ಣಿನಿಂದ ಮುಚ್ಚಿ. ಬಾಳೆಹಣ್ಣಿನಲ್ಲಿ ಸಿಲಿಕಾ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳಿವೆ. ಈ ಎರಡು ಅಂಶಗಳು ತಲೆಹೊಟ್ಟು ಕಡಿಮೆ ಮಾಡಲು ಮತ್ತು ನೆತ್ತಿಯನ್ನು ಒಣಗಿಸಲು ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನಿ ಫೈಲ್ ಆಗುವುದಕ್ಕಿಂತ ಮುನ್ನ ಕಾಣಿಸುತ್ತವೆ ಈ ಲಕ್ಷಣಗಳು