Select Your Language

Notifications

webdunia
webdunia
webdunia
webdunia

ನೇರಳೆ ಹಣ್ಣಿನ ಆರೋಗ್ಯಕರ ಉಪಯೋಗಗಳು

ನೇರಳೆ ಹಣ್ಣಿನ ಆರೋಗ್ಯಕರ ಉಪಯೋಗಗಳು
ಬೆಂಗಳೂರು , ಮಂಗಳವಾರ, 19 ಜೂನ್ 2018 (15:21 IST)
ನೇರಳೆ ಹಣ್ಣಿನಲ್ಲಿರು ಪ್ರೋಟೀನ್, ವಿಟಾಮಿನ್, ಆಂಟಿಆಕ್ಸಿಡೆಂಟ್, ಫ್ಲಾವಿನೋಯ್ಡ್ಸ್, ಮ್ಯಾಂಗನೀಸ್, ಪೋಟ್ಯಾಶಿಯಂ, ಕ್ಯಾಲ್ಸಿಯಂ ಮೊದಲಾದ ಅಂಶಗಳನ್ನು ಹೊಂದಿದೆ. ಇದು ನಮ್ಮ ಆರೋಗ್ಯದ ಮೇಲೆ ಅತ್ಯಂತ ಪರಿಣಾಮವನ್ನು ಬೀರುತ್ತದೆ. ಅಪಾರ ಪೌಷ್ಟಿಕಾಂಶಗಳನ್ನು ಹೊಂದಿರುವ ನೇರಳೆ ರೋಗ ನಿರೋಧಕವಾಗಿಯೂ ಬಳಕೆಯಾಗುತ್ತದೆ.
* ಹಲವಾರು ಖನಿಜಾಂಶಗಳನ್ನು ಹೊಂದಿರುವ ನೇರಳೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 
* ನೇರಳೆ ಹಣ್ಣಿನ ಸೇವನೆಯಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ.
 
* ನೇರಳೆ ಹಣ್ಣಿನ ನಿಯಮಿತ ಸೇವನೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡಬಹುದು.
 
* ಪ್ರತಿದಿನ ಊಟದ ನಂತರ ಹನ್ನೆರಡು ನೇರಳೆ ಹಣ್ಣುಗಳನ್ನು ಸೇವಿಸಿದರೆ ಕ್ರಮೇಣ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
 
* ನೇರಳೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ರಕ್ತವನ್ನು ಶುದ್ಧ ಮಾಡುವಲ್ಲೂ ಇದರ ಪಾತ್ರ ಅಧಿಕವಾಗಿದೆ.
 
* ನೇರಳೆ ಹಣ್ಣಿನ ರಸವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಉಬ್ಬಸವನ್ನು ಕಡಿಮೆ ಮಾಡಬಹುದು.
 
* ನೇರಳೆ ಹಣ್ಣಿನ ಜ್ಯೂಸ್‌ ಅನ್ನು ಮೌತ್‌ವಾಶ್‌ನಂತೆ ಬಳಕೆ ಮಾಡಬಹುದು. ಇದು ಕೆಟ್ಟ ಉಸಿರಾಟದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
 
* ಚರ್ಮದ ಉರಿ ಸಮಸ್ಯೆ ಇದ್ದರೆ ನೇರಳೆ ಹಣ್ಣಿನ ಪೇಸ್ಟ್‌ಗೆ ಸಾಸಿವೆ ಎಣ್ಣೆ ಕಲಸಿ ಉರಿ ಇರುವ ಜಾಗಕ್ಕೆ ಲೇಪನ ಮಾಡಿದರೆ ಉರಿ ಶಮನವಾಗುತ್ತದೆ. 
 
* ನಿತ್ಯ ನೇರಳೆ ಹಣ್ಣನ್ನು ತಿನ್ನುವುದರಿಂದ ಚರ್ಮದ ಮೇಲೆ ಸುಕ್ಕುಗಳು ಆಗಲ್ಲ. ವೃದ್ದಾಪ್ಯ ಛಾಯೆಗಳು ಬೇಗ ಬರಲ್ಲ.
 
* ನೇರಳೆ ಹಣ್ಣನ್ನು ತಿನ್ನುವುದರಿಂದ ಅಜೀರ್ಣ ಸಮಸ್ಯೆಗಳು ದೂರವಾಗುತ್ತವೆ. ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಚಯಾಪಚಯೆ ಕ್ರಿಯೆ ಉತ್ತಮಗೊಳ್ಳುತ್ತದೆ.
 
* ನೇರಳೆ ಹಣ್ಣಿ ಬೀಜವನ್ನು ಪುಡಿಮಾಡಿ ಅದಕ್ಕೆ ಶುಧ್ದ ಹಸುವಿನ ಹಾಲನ್ನು ಸೇರಿಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಕಡಿಮೆಯಾಗುತ್ತದೆ.
 
* ನೇರಳೆ ಎಲೆಗಳ ಜ್ಯೂಸ್‌ ಸೇವಿಸಿದರೆ ರಕ್ತ ಸ್ರಾವ ನಿಲ್ಲುತ್ತದೆ.
 
* ನೇರಳೆ ಹಣ್ಣಿನ ಜ್ಯೂಸ್‌ನಲ್ಲಿ ಬಯೋಆಕ್ಟೀವ್‌ ಫಿಟೋಕೆಮಿಕಲ್‌ ಲಿವರ್‌ ಸಮಸ್ಯೆ ಮತ್ತು ಕ್ಯಾನ್ಸರ್‌ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
 
* ನೇರಳೆ ಬೀಜದ ಪುಡಿಗೆ ನಿಂಬೆ, ಧಾನ್ಯದಿಂದ ತಯಾರಿಸಲಾದ ಹಿಟ್ಟು, ಬಾದಾಮಿ ಎಣ್ಣೆ ಇವೆಲ್ಲದರ ಮಿಶ್ರಣವನ್ನು ಕಲಸಿ ಕಲೆ ಇರುವ ಜಾಗಕ್ಕೆ ಹಚ್ಚಬೇಕು ಆಗ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
 
* ನೇರಳೆ ಎಲೆಗಳನ್ನು ಅಗಿದು ರಸ ಕುಡಿದರೆ ಅಲ್ಸರ್‌ ನಿವಾರಣೆಯಾಗುತ್ತದೆ.
 
* ನೇರಳೆ ಹಣ್ಣಿನ ಎಲೆ, ಗೆಲ್ಲು ಮತ್ತು ಬೀಜಗಳು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ. 
 
* ನೇರಳೆ ಹಣ್ಣಿನ ಸೇವನೆಯಿಂದ ಹಲ್ಲುಗಳು ಗಟ್ಟಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಳವಾದ ವಿಧಾನಗಳನ್ನು ಅನುಸರಿಸಿ ಸುಂದರವಾದ ಕಣ್ಣುಗಳನ್ನು ನಿಮ್ಮದಾಗಿಸಿಕೊಳ್ಳಿ..