Webdunia - Bharat's app for daily news and videos

Install App

ಊಟದಲ್ಲಿ ಅವಶ್ಯಕವಾಗಿರಲಿ ಆರೋಗ್ಯಕರ ಮೆಂತ್ಯೆ ಸೊಪ್ಪು

Webdunia
ಗುರುವಾರ, 16 ಸೆಪ್ಟಂಬರ್ 2021 (07:03 IST)
ಚಳಿಗಾಲದಲ್ಲಿ ಮೆಂತ್ಯೆ ಬಳಕೆ ಬಹಳ ಪ್ರಯೋಜನಕಾರಿ. ಮೆಂತ್ಯೆ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಹಸಿರು ಎಲೆಗಳ ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೇದು. ಚಳಿಗಾಲದಲ್ಲಿ ಹಸಿರು ಸೊಪ್ಪು ಅದ್ರಲ್ಲೂ ಮುಖ್ಯವಾಗಿ ಮೆಂತ್ಯೆ ಸೊಪ್ಪನ್ನು ಅವಶ್ಯಕವಾಗಿ ಸೇವನೆ ಮಾಡಬೇಕು.
Photo Courtesy: Google

ಮೆಂತ್ಯೆಸೊಪ್ಪಿಗೆ ಈರುಳ್ಳಿ ಹಾಕಿ ಮಿಕ್ಸ್ ಮಾಡಿ ತಿನ್ನಿ. ಇದ್ರಿಂದ ರಕ್ತದೊತ್ತಡದ ಸಮಸ್ಯೆ ಕಡಿಮೆಯಾಗುತ್ತದೆ. ಮೆಂತ್ಯದ ಸೊಪ್ಪನ್ನು ಹೃದಯ ಸಂಬಂಧಿ ಖಾಯಿಲೆ ಹೊಂದಿರುವವರು ಅಗತ್ಯವಾಗಿ ಸೇವನೆ ಮಾಡಬೇಕು. ಹೃದಯದ ಆರೋಗ್ಯವನ್ನು ಸಮತೋಲನದಲ್ಲಿಡುತ್ತದೆ.
ಮೆಂತ್ಯೆಯಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳಿವೆ. ಮೆಂತ್ಯೆ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಮೆಂತ್ಯೆಯಿಂದ ಮಾಡಿದ ಕಷಾಯವನ್ನು ತೆಗೆದುಕೊಂಡರೆ ಮಲಬದ್ಧತೆ ಕಡಿಮೆ ಆಗುತ್ತೆ.
ಮಧುಮೇಹ ಸಮಸ್ಯೆಗಳನ್ನು ಹೊಂದಿರುವವರು ಮೆಂತ್ಯೆ ಕಾಳು ಮತ್ತು ಮೆಂತ್ಯೆ ಸೊಪ್ಪು ತಿಂದ್ರೆ ತುಂಬ ಒಳ್ಳೇದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಮೆಂತ್ಯ ಮೊಡವೆ ಮತ್ತು ಮುಖದ ಸುಕ್ಕುಗಳನ್ನು ಕಡಿಮೆಗೊಳಿಸುತ್ತದೆ. ಮೆಂತ್ಯೆ ಬೀಜವನ್ನು ನೀರಿನಲ್ಲಿ ಕುದಿಸಿ, ಆ ನೀರಿನಿಂದ ಮುಖವನ್ನು ತೊಳೆಯಿರಿ. ಇದ್ರಿಂದ ಮುಖದ ಕಾಂತಿ ಹೆಚ್ಚುತ್ತದೆ.
ದೈನಂದಿನ ಆಹಾರದಲ್ಲಿ ಸೇರಿಸಿದ ಮೆಂತ್ಯದ ಪೇಸ್ಟ್ ಅಥವಾ ಮೆಂತ್ಯೆ ಕಾಳು ಕೂದಲು ದಪ್ಪ ಮತ್ತು ಕಪ್ಪಗಾಗಲು ಕಾರಣವಾಗುತ್ತದೆ. ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗಲು ಮೆಂತ್ಯದ ಎಣ್ಣೆಗೆ ತೆಂಗಿನ ಎಣ್ಣೆ ಸೇರಿಸಿ ಹಚ್ಚಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ

ಮುಂದಿನ ಸುದ್ದಿ
Show comments