Publish Date: Tue, 14 Sep 2021 (10:50 IST)
Updated Date: Tue, 14 Sep 2021 (10:35 IST)
ನವದೆಹಲಿ : ದೇಶದಾದ್ಯಂತ 24 ಗಂಟೆಗಳಲ್ಲಿ 25,404 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 339 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,32,89,579 ಕ್ಕೆ ಏರಿಕೆಯಾಗಿದೆ. ಆ ಪೈಕಿ 4,43,213 ಮಂದಿ ಸಾವಿಗೀಡಾಗಿದ್ದಾರೆ.
ಹೊಸದಾಗಿ 37,127 ಮಂದಿ ಚೇತರಿಸಿಕೊಂಡಿದ್ದು, ಇದುವರೆಗೆ 3,24,84,159 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 3,62,207 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ ಸೋಮವಾರ ಹೊಸದಾಗಿ 15,058 ಪ್ರಕರಣಗಳು ಪತ್ತೆಯಾಗಿದ್ದು, 99 ಮಂದಿ ಕೊನೆಯುಸಿರೆಳೆದಿದ್ದಾರೆ.
ಸದ್ಯ ಕೇರಳದಲ್ಲಿ 2,09,335, ಮಹಾರಾಷ್ಟ್ರದಲ್ಲಿ 53,427, ತಮಿಳುನಾಡಿನಲ್ಲಿ 16,522, ಕರ್ನಾಟಕದಲ್ಲಿ 16,269, ಆಂಧ್ರ ಪ್ರದೇಶದಲ್ಲಿ 14,652 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ 75,22,38,324 ಕೋವಿಡ್ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.