Select Your Language

Notifications

webdunia
webdunia
webdunia
webdunia

ತುಳಸಿ ಗಿಡ ಮನೆ ಮುಂದೆ ನೆಡುವುದರ ಲಾಭವೇನು ಗೊತ್ತಾ?

ತುಳಸಿ ಗಿಡ ಮನೆ ಮುಂದೆ ನೆಡುವುದರ ಲಾಭವೇನು ಗೊತ್ತಾ?
ಬೆಂಗಳೂರು , ಬುಧವಾರ, 20 ಸೆಪ್ಟಂಬರ್ 2017 (08:45 IST)
ಬೆಂಗಳೂರು: ಹಿಂದೂ ಸಂಪ್ರದಾಯ ಪಾಲಿಸುವ ಹೆಚ್ಚಿನವರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಹಲವು ರೋಗಗಳಿಗೆ ಮದ್ದು ಎಂದು ಆಯುರ್ವೇದ ಹೇಳುತ್ತದೆ. ಹೀಗಾಗಿ ತುಳಸಿ ಗಿಡ ಮನೆ ಸುತ್ತ ಇರುವುದರಿಂದ ಆಗುವ ಲಾಭಗಳೇನು ನೋಡೋಣ.

 
ಸೊಳ್ಳೆ ಬರಲ್ಲ
ಸಂಜೆಯಾದರೆ ಸಾಕು ಸೊಳ್ಳೆ ಕಾಟ ಎನ್ನುವವರು ಮನೆಯ ಸುತ್ತ ಹೆಚ್ಚು ಹೆಚ್ಚು ತುಳಸಿ ಗಿಡ ನೆಟ್ಟು ನೋಡಿ. ಇದರ ಸುವಾಸನೆಗೆ ಸೊಳ್ಳೆ ಹೆಚ್ಚು ಸುಳಿಯಲಾರದು. ಇದು ಗಾಳಿಯನ್ನು ನಿರ್ಮಲಗೊಳಿಸುತ್ತದೆ.

ನಿರ್ಮಲ ಗಾಳಿ
ಮೊದಲೇ ಹೇಳಿದಂತೆ ಇದರಿಂದ ಗಾಳಿ ನಿರ್ಮಲವಾಗುತ್ತದೆ. ಬೇರೆ ಸಸ್ಯ ಸಂಕುಲಗಳಿಗೆ ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಅಂದಾಜು ದಿನಕ್ಕೆ 20 ಗಂಟೆಗಳ ಕಾಲ ಇದು ಆಮ್ಲಜನಕ ಹೊರಸೂಸುತ್ತವೆ ಎನ್ನಲಾಗಿದೆ. ಅಲ್ಲದೆ ಇದರಿಂದ ಹೊರಹೊಮ್ಮುವ ಸುವಾಸನೆ ನಮ್ಮ ಲಹರಿಯನ್ನು ಉತ್ತಮಗೊಳಿಸುತ್ತದೆ.

ರೋಗಗಳಿಗೆ ರಾಮಬಾಣ
ಹಲವು ಶೀತ ಸಂಬಂಧೀ ರೋಗಗಳಿಗೆ ತುಳಸಿ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಪ್ರತಿ ನಿತ್ಯ ಇದರ ಎಲೆಯನ್ನು ಜಗಿಯುತ್ತಿದ್ದರೆ ಶೀತ, ಕಫ, ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.

ಕಿಡ್ನಿ ಕಲ್ಲು
ನಿಮಗೆ ಗೊತ್ತೇ? ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ತುಳಸಿ ಎಲೆಯ ರಸದ ಜತೆಗೆ ಜೇನು ತುಪ್ಪ ಸೇರಿಸಿ ಕುಡಿಯುತ್ತಿದ್ದರೆ ಒಳ್ಳೆಯದು. ಹಾಗಾಗಿ ಮನೆಯ ಸುತ್ತ ತುಳಸಿ ಗಿಡ ನೆಡುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಟ್ಟುಗುಳ್ಳ ಪೋಡಿ ಮಾಡುವ ಸಿಂಪಲ್ ರೆಸಿಪಿ