Webdunia - Bharat's app for daily news and videos

Install App

ನಿಮ್ಮ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಕಾಡದಿರಲು ಇವುಗಳನ್ನು ನೀಡಿ

Webdunia
ಶನಿವಾರ, 11 ಆಗಸ್ಟ್ 2018 (10:48 IST)
ಬೆಂಗಳೂರು : ಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಮಲ ಬದ್ಧತೆಯೂ ಒಂದು. ಎರಡು-ಮೂರು ದಿನವಾದರೂ ಮಲ ವಿಸರ್ಜಸದೇ ಹೋದಲ್ಲಿ, ಮಗುವಿಗೆ ಹೊಟ್ಟೆನೋವು ಇರಬಹುದೆಂದು ತಾಯಿ ಆತಂಕಗೊಳ್ಳುತ್ತಾಳೆ. ಮಕ್ಕಳನ್ನು ಕಾಡೋ ಈ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮದ್ದು.


ನೀರು: ಮಗು ದಿನವಿಡೀ ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಿ. ಇಲ್ಲವಾದ್ದರೆ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ನೀರಿನ ಅಂಶ ಕಡಿಮೆಯಾಗೋದರಿಂದ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಪ್ರತಿದಿನ ಮಲವಿಸರ್ಜನೆ ಸರಾಗವಾಗಿ ಆಗಬೇಕೆಂದಿದ್ದರೆ ಸಾಧ್ಯವಾದಷ್ಟು ನೀರನ್ನು ಮಗುವಿಗೆ ನೀಡಬೇಕು. 


ಫೈಬರ್ ಅಂಶ ಆಹಾರ : ಹೌದು ಮಕ್ಕಳಿಗೆ ನಾರಿನಂಶ ಇರುವಂತಹ ಆಹಾರ ನೀಡಿದರೆ ಮಲಬದ್ಧತೆಯ ಸಮಸ್ಯೆಗೆ ಫುಲ್‌ಸ್ಟಾಪ್ ಇಡಬಹುದು. ಅದಕ್ಕಾಗಿ ಬಾಳೆಹಣ್ಣು, ಸೇಬು ಹಣ್ಣು, ಸೀಬೆ ಹಣ್ಣು, ಕಿತ್ತಲೆ ಹಣ್ಣುಗಳನ್ನು ಹೆಚ್ಚು ಹೆಚ್ಚು ನೀಡಿದರೆ ಉತ್ತಮ. ಇದಲ್ಲದೆ ಫೈಬರ್ ಅಂಶ ಇರುವಂತಹ ದವಸ ಧಾನ್ಯಗಳು, ಬೀನ್ಸ್ ಮೊದಲಾದವುಗಳನ್ನು ಪ್ರತಿನಿತ್ಯ ಮಗುವಿಗೆ ನೀಡಿದರೆ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. 


ಆಲಿವ್ ಆಯಿಲ್: ಖಾಲಿ ಹೊಟ್ಟೆಗೆ ಒಂದು ಚಮಚ ಆಲಿವ್ ಆಯಿಲ್ ಜತೆ, ಒಂದು ಚಮಚ ನಿಂಬೆರಸ ಬೆರೆಸಿ, ಸೇವಿಸಿದರೆ ಹೊಟ್ಟೆ ಹಗುರವಾಗುತ್ತದೆ. ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. 

ಅಲೋವೆರಾ: ಅಲೋವೆರಾವನ್ನು ಸೌಂದರ್ಯ ಹೆಚ್ಚಿಸುವಲ್ಲಿ ಉಪಯೋಗಿಸುತ್ತಾರೆ. ಇದರಿಂದ ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸಬಹುದು. ಎರಡು ಚಮಚ ಅಲೋವೆರಾ ಜೆಲ್ ಅನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿಯಲು ನೀಡಿದರೆ ಹೊಟ್ಟೆ ಹಗುರವಾಗುತ್ತದೆ.

ಮೊಸರು: ಮಕ್ಕಳಲ್ಲಿ ಮಲವಿಸರ್ಜನೆ ಸರಾಗವಾಗಿ ನಡೆಯಬೇಕೆಂದರೆ ಮೊಸರು ಉತ್ತಮ ಔಷಧಿ. ಇದನ್ನು ಮಕ್ಕಳಿಗೆ ಸೇವಿಸಲು ನೀಡಿದರೆ ಅದರಲ್ಲಿರುವ ಉತ್ತಮ ಬ್ಯಾಕ್ಟಿರಿಯಾದಿಂದ ಹೊಟ್ಟೆ ಕ್ಲೀನ್ ಆಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments