Select Your Language

Notifications

webdunia
webdunia
webdunia
webdunia

ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ

ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ
ಬೆಂಗಳೂರು , ಶನಿವಾರ, 3 ಫೆಬ್ರವರಿ 2018 (06:45 IST)
ಬೆಂಗಳೂರು : ಹೆಣ್ಣು ಮಕ್ಕಳು ಋತುವತಿಯಾಗುವುದು ಸಹಜ ಪ್ರಕ್ರಿಯೆ. ಸಾಮಾನ್ಯವಾಗಿ 13 ವರ್ಷದ ನಂತರ ಹೆಣ್ಣು ಮಕ್ಕಳಲ್ಲಿ ಹಲವಾರು ದೈಹಿಕ ಬದಲಾವಣೆ ಕಂಡು ಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಆತಂಕದ ಸಂಗತಿ ಎಂದರೆ 7-8 ವಯಸ್ಸಿಗೆಲ್ಲಾ ಹೆಣ್ಣುಮಕ್ಕಳಲ್ಲಿ ಋತುಚಕ್ರ ಪ್ರಾರಂಭವಾಗುತ್ತಿದೆ. ಅದರಲ್ಲೂ ನಗರ ಪ್ರದೇಶದ ಮಕ್ಕಳು ಅತೀ ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುತ್ತಿದ್ದಾರೆ.


ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದಿಂದ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಅಲ್ಲದೆ ಚಿಕ್ಕಪ್ರಾಯದಲ್ಲಿಯೇ ಋತುಮತಿಯಾದರೆ ಅವರಲ್ಲಿ ಲೈಂಗಿಕ ಆಸೆ ಬೇಗನೆ ಮೂಡುವುದು, ಇದು ಅಪಾಯಕಾರಿ, ಏಕೆಂದರೆ ಈ ಪ್ರಾಯದಲ್ಲಿ ಸರಿ-ತಪ್ಪುಗಳ ಅರಿವು ಇರುವುದಿಲ್ಲ ಎಂದಿದ್ದಾರೆ.

ಈ ಸಮಸ್ಯೆ ತಪ್ಪಿಸಲು ಕೆಲವು ಎಚ್ಚರಿಕೆ ಕ್ರಮಗಳನ್ನು  ತೆಗೆದುಕೊಳ್ಳಬೇಕು. ಅವುಗಳೆಂದರೆ
*ಮಗುವಾಗಿರುವಾಗ ಎದೆ ಹಾಲು ಕುಡಿಸುವುದು ತುಂಬಾ ಮುಖ್ಯ.
*ಗರ್ಭಿಣಿಯಾಗಿರುವಾಗ ಸೋಯಾ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು.
* ಗರ್ಭಾವಸ್ಥೆಯಲ್ಲಿರುವಾಗ ಸಾವಯವ ತರಕಾರಿ, ಹಣ್ಣುಗಳನ್ನು ತಿನ್ನುವುದು.
* ಪ್ಲಾಸ್ಟಿಕ್‌ ಬಾಟಲಿ ನೀರಿನ್ನು ಕುಡಿಯಬಾರದು.
* ಹೈಬ್ರೀಡ್‌ ತಳಿಯ ಹಸುಗಳ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬದಲು ನಾಟಿ ತಳಿಯ ಹಸುಗಳ ಹಾಲು ಮಕ್ಕಳಿಗೆ ನೀಡಿ.
* ಮಕ್ಕಳಿಗೆ BPA ಮುಕ್ತ ಆಟದ ಸಾಮಾನು ನೀಡಿ.
* ಏರ್‌ ಫ್ರೆಶ್‌ನರ್‌ ಬಳಸದಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅವರೆ ಕಾಳಿನ ಕುರ್ಮಾ...!!