Select Your Language

Notifications

webdunia
webdunia
webdunia
webdunia

ಮೊದಲ ರಾತ್ರಿಯೇ ಸೆಕ್ಸ್ ಎಷ್ಟು ಒಳ್ಳೆಯದು?

ಮೊದಲ ರಾತ್ರಿಯೇ ಸೆಕ್ಸ್ ಎಷ್ಟು ಒಳ್ಳೆಯದು?
ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (08:14 IST)
ಬೆಂಗಳೂರು: ಮೊದಲ ರಾತ್ರಿ ಬಗ್ಗೆ ಪ್ರತಿಯೊಬ್ಬ ಗಂಡು-ಹೆಣ್ಣಿಗೂ ಹಲವು ನಿರೀಕ್ಷೆಗಳಿರುತ್ತವೆ. ಆ ರಾತ್ರಿ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ನಮ್ಮ ಮುಂದಿನ ಜೀವನಕ್ಕೆ ತಳಹದಿಯಾಗಿರುತ್ತದೆ.

ಗಂಡ-ಹೆಂಡತಿ ಎಂದ ಮೇಲೆ ಸೆಕ್ಸ್ ವಿಚಾರ ಬರಲೇಬೇಕು. ಆದರೆ ಮೊದಲ ರಾತ್ರಿ ಹೆಣ್ಣಿನ ಮನಸ್ಸನ್ನು ಅರಿತು ನಡೆಯಬೇಕಾದ್ದು ಗಂಡಿನ ಕರ್ತವ್ಯ.

ಆಕೆಯನ್ನು ಬಲವಂತ ಮಾಡಿದರೆ ಜೀವನ ಪೂರ್ತಿ ಆಕೆಗೆ ಲೈಂಗಿಕತೆ ಬಗ್ಗೆ ನಿಮ್ಮೊಂದಿಗೆ ತೆರೆದುಕೊಳ್ಳಲು ಆಸಕ್ತಿ ಬರದೇ ಇರಬಹುದು. ನೀವು ಮದುವೆಗೆ ಮೊದಲು ಎಷ್ಟೇ ಪರಿಚಿತರಾದರೂ, ಆ ರಾತ್ರಿ ಪರಸ್ಪರ ಆಸಕ್ತಿಗಳನ್ನು ಹಂಚಿಕೊಳ್ಳುವುದಕ್ಕೆ, ಇಷ್ಟ-ಕಷ್ಟಗಳನ್ನು ಅರಿಯುವುದಕ್ಕೆ ಬಿಡುವುದು ಉತ್ತಮ.

ಸೆಕ್ಸ್ ವಿಚಾರದಲ್ಲಿ ಎಷ್ಟು ಸಂಯಮದಿಂದಿರುತ್ತೀರೋ ಅಷ್ಟೇ ನಿಮ್ಮ ಬಾಳು ಸುಮಧುರವಾಗಿರುತ್ತದೆ ಎನ್ನುವುದನ್ನು ಮರೆಯಬಾರದು. ಹಾಗಾಗಿ ಮೊದಲು ಅವಳ ಪ್ರೀತಿ, ವಿಶ್ವಾಸ ಗೆಲ್ಲಲು ಪ್ರಯತ್ನ ಪಡಿ. ನಂತರವಷ್ಟೇ ಮುಂದಿನ ವಿಚಾರ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಥಟ್ ಅಂತ ರೆಡಿಯಾಗುವ ರುಚಿಯಾದ ಈರುಳ್ಳಿ ರವಾ ದೋಸೆ