Select Your Language

Notifications

webdunia
webdunia
webdunia
webdunia

ಪ್ರೇಮಿ ಕೈಕೊಟ್ಟಾಗ ಮರೆಯೋದು ಹೇಗೆ?

ಪ್ರೇಮಿ ಕೈಕೊಟ್ಟಾಗ ಮರೆಯೋದು ಹೇಗೆ?
Bangalore , ಶನಿವಾರ, 8 ಜುಲೈ 2017 (09:42 IST)
ಬೆಂಗಳೂರು: ಪ್ರೀತಿ, ಪ್ರೇಮ, ಕೊನೆಗೆ ಬ್ರೇಕ್ ಅಪ್. ಬ್ರೇಕ್ ಅಪ್ ಆಗೋದು ಅಂದ್ರೆ ತಮಾಷೆಯಲ್ಲ. ಪ್ರೀತಿಸಿದಾಕೆ ಅಥವಾ ಆತನನ್ನು ಮರೆಯೋದು ಅಷ್ಟು ಸುಲಭವಲ್ಲ. ಮರೆಯೋದು ಹೇಗೆ ಅನ್ನುವುದಕ್ಕೆ ಕೆಲವು ಟಿಪ್ಸ್ ಇದೆ ನೋಡಿ.


ಪ್ರವಾಸ ಹೋಗಿ
ಬೆಸ್ಟ್ ಎಂದರೆ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ನೀವು ಇಷ್ಟಪಡುವ ಸ್ಥಳಕ್ಕೆ ಪ್ರವಾಸ ಹೋಗಿ. ಒಬ್ಬರೇ ಹೋದರೂ ಸರಿಯೇ, ಗೆಳೆಯರ ಜತೆಗಾದರೂ ಸರಿಯೇ. ನೀವು ಇಷ್ಟಪಡುವ ರೀತಿಯಲ್ಲಿ ಎಂಜಾ ಮಾಡಿ ಬನ್ನಿ. ರಿಫ್ರೆಷ್ ಆಗುತ್ತೀರಿ.

ನಿಮ್ಮನ್ನು ನೀವೇ ಸಮಾಧಾನ ಮಾಡಿಕೊಳ್ಳಿ
ಇದು ಎಲ್ಲಾ ದುಃಖಗಳಿಗೂ ಅನ್ವಯಿಸುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಬಂದಾಗ ನಿಮ್ಮನ್ನು ನೀವು ಕನ್ನಡಿ ಮುಂದೆ ನಿಂತು ಸಮಾಧಾನಿಸುವ ಕಲೆ ಗೊತ್ತಿರಬೇಕು. ನಾನು ಎಂದರೆ ಏನು ಎಂದು ನೆನಪಿಸಿಕೊಳ್ಳಬೇಕು. ಆತನಿಗೋಸ್ಕರ ಅಥವಾ ಆಕೆಗೋಸ್ಕರ ನಿಮ್ಮ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಳ್ಳಿ.

ಗೆಳೆಯರ ಜತೆ ಪಾರ್ಟಿ ಮಾಡಿ
ಇತ್ತೀಚೆಗೆ ಬ್ಯಾಚ್ಯುಲರ್ ಪಾರ್ಟಿ ಕಾಮನ್. ಹಾಗಾಗಿ ಪ್ರೇಮಿ ಕೈಕೊಟ್ಟ ಮೇಲೆ ಸಿಂಗ್ಯುಲರ್ ಪಾರ್ಟಿ ಮಾಡಿ ದುಃಖ ಮರೆಯುವ ಪ್ರಯತ್ನ ಮಾಡಬಹುದು.

ಇಷ್ಟಪಟ್ಟಿದ್ದನ್ನು ಮಾಡಿ
ಇಷ್ಟು ದಿನ ಆಕೆ ಅಥವಾ ಆತನಿಗಾಗಿ ನಿಮ್ಮ ಕೆಲವು ಇಷ್ಟದ ಕೆಲಸಗಳನ್ನು, ತಿಂಡಿಗಳನ್ನು ತಿನ್ನದೇ ಅಡ್ಜಸ್ಟ್ ಮಾಡಿದ್ದಿರಬಹುದು. ಇದೀಗ ನಿಮ್ಮ ಮನಸೋ ಇಚ್ಛೆ ತಿಂದು ತೇಗಿ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾರ್ಮಲ್ ಡೆಲಿವರಿ ಆಗಬೇಕಾದರೆ ಏನು ಮಾಡಬೇಕು?